ಮಾಂತ್ರಿಕ ಛಾಯಾಗ್ರಾಹಕ ವಿನಯ್ ಬಗ್ಗೆ…

Picture of Cinibuzz

Cinibuzz

Bureau Report

ಸಿನಿಬಜ್ ತಂಡದ ವಿಡಿಯೋ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವವರು ವಿನಯ್ ಕುಮಾರ್. ‘ವಿನೀ ಫೋಟೋಗ್ರಫಿ’ ಮೂಲಕ ಸಾಕಷ್ಟು ಮಾಡೆಲ್‌ಗಳ ಫೋಟೋಶೂಟ್ ಕೂಡಾ ಮಾಡಿದ್ದಾರೆ. ವಿನಯ್ ಚಿತ್ರೀಕರಿಸುವ ವಿಡಿಯೋಗಳು ಸಿನಿಬಜ಼್’ನ ಬಣ್ಣವನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಬಜ಼್’ನಲ್ಲಿ ಪ್ರಸಾರವಾಗುವ ಸಂದರ್ಶನಗಳ ಗುಣಮಟ್ಟದ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು, ಹೊಗಳಿಕೆಗಳು ವ್ಯಕ್ತವಾಗುತ್ತಿರುತ್ತವೆ. ಅದಕ್ಕೆ ವಿನಯ್ ಬಹುಮುಖ್ಯ ಕಾರಣ. ಇನ್ನು ನಮ್ಮ ತಂಡ ಸಾಕಷ್ಟು ಹೊಸ ಹೊಸ ಕಾನ್ಸೆಪ್ಟುಗಳನ್ನು ಪರಿಚಯಿಸಲಿದೆ. ಅದೆಲ್ಲದರ ಹಿಂದೆ ವಿನಯ್ ಇದ್ದೇಇರುತ್ತಾರೆ.


ವಿನಯ್ ಅವರ ಫೋಟೋ ಕ್ಲಿಕ್ಕಿಸುವ ಬೆರಳುಗಳಲ್ಲೇ ಒಂದು ರೀತಿಯ ಮಾಂತ್ರಿಕ ಸ್ಪರ್ಶವಿದೆ. ಅಷ್ಟು ಸುಲಭಕ್ಕೆ ಹಿಡಿದಿಡಲಾರದ ಸೂಕ್ಷ್ಮ ವಿವರಗಳನ್ನು ಅವರ ಕ್ಯಾಮೆರಾ ಕಣ್ಣು ಕ್ಯಾಪ್ಚರ್ ಮಾಡುತ್ತದೆ. ಆ ಮೋಡಿಯ ಸ್ಯಾಂಪಲ್ಲು ಇಲ್ಲಿದೆ… ‘ಫೋಟೋ ಬಜ಼್’ ಹೆಸರಿನ ವಿನೂತನ ಅಂಕಣದ ಮೂಲಕ ವಿನಯ್ ನಿಮ್ಮಿಷ್ಟದ ತಾರೆಯರನ್ನು ನಿಮ್ಮ ಮುಂದೆ ಪ್ರತಿಷ್ಠಾಪಿಸಲಿದ್ದಾರೆ.

ಇನ್ನಷ್ಟು ಓದಿರಿ

Scroll to Top