ಶ್ರೇಯಾಗೆ ಕಿಸ್ ಕೊಟ್ಟವನು ಯಾರು ಗೊತ್ತಾ?

Picture of Cinibuzz

Cinibuzz

Bureau Report

ನಟಿ ಶ್ರೇಯಾ ಶರಣ್ ಗೊತ್ತಲ್ಲ? ಸೂಪರ್ ಸ್ಟಾರ್ ರಜನಿಕಾಂತ್ ಅವರ ಶಿವಾಜಿ ಸಿನಿಮಾದ ಮೂಲಕ ಎಳೇ ಹುಡುಗರಿಂದ ಹಿಡಿದು ಹಣ್ಣಣ್ಣು ಮುದುಕರ ತನಕ ಎಲ್ಲರ ನಿದ್ದೆಗೆಡಿಸಿದ್ದವಳು. ಕನ್ನಡದಲ್ಲೂ ರೂಪಾ ಅಯ್ಯರ್ ನಿರ್ದೇಶನದಲ್ಲಿ ಬಂದಿದ್ದ ಚಂದ್ರ ಸಿನಿಮಾದಲ್ಲಿ ನಟಿಸಿದ್ದವಳು. ಸದ್ಯ ಶ್ರೇಯಾ ಆಂಡ್ರೆ ಕೊಸ್ಚೀವ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಇದಾದ ನಂತರ ಒಂದಲ್ಲ ಒಂದು ಫೋಟೋಗಳನ್ನು ಬಿಟ್ಟು ಸ್ವತಃ ಸುದ್ದಿಯಾಗುತ್ತಿದ್ದಾಳೆ. ತಿಂಗಳ ಹಿಂದೆ ಶ್ರೇಯಾಳ ಬಿಕಿನಿ ವಿಡಿಯೋ ವೈರಲ್ ಆಗಿತ್ತು. ಹಾಲಿಡೇ ಮೂಡ್ ನಲ್ಲಿದ್ದ ಶ್ರೇಯಾ ಮೆಡಿಟರೇನಿಯನ್ ಸಮುದ್ರದ ನಡುವಿನ ಇಬಿಜಾ ದ್ವೀಪದಲ್ಲಿ ಖುಷಿಯಾಗಿ ಕಾಲಕಳೆದು ಬಂದಿದ್ದಳು. ಈ ನಡುವೆ ಆಕೆ ಪಿಂಕ್ ಬಣ್ಣದ ಬಿಕಿನಿ ಧರಿಸಿ ಸಖತ್ತಾಗಿಯೇ ಸ್ಟೆಪ್ಪು ಹಾಕಿರುವ ವಿಡಿಯೋ ವೈರಲ್ ಆಗಿತ್ತು. ಇನ್ನು ಈ ಹಾಟ್ ವಿಡಿಯೋವನ್ನು ಶ್ರೇಯಾ ಅವರ ಪತಿ ಆಂಡ್ರೆ ಕೊಸ್ಚೀವ್ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಶ್ರೀಯಾ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಳು. ಈ ವಿಡಿಯೋವನ್ನು ೮ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಕಮೆಂಟ್ ಮಾಡಿದ್ದರು.

ಕೆಲವರು ತನ್ನ ಪತ್ನಿಯ ಬಿಕಿನಿ ವಿಡಿಯೋವನ್ನೇ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾನೆಂದರೆ ಇವನೆಂತಾ ಗಂಡ ಅಂತಾ ಶ್ರೇಯಾಳ ಪತಿಯ ವಿರುದ್ಧ ಕಿಡಿ ಕಾರಿದ್ದರು. ಇನ್ನೊಂದಷ್ಟು ಜನ ಈತ ಎಷ್ಟೊಂದು ಫ್ರೇಂಡ್ಲೀ ಪತಿ ಅಂತಾ ಹೊಗಳಿದ್ದರು.

ಈಗ ಶ್ರೇಯಾ ತನ್ನ ಗಂಡನ ಜೊತೆಗಿನ ಲಿಪ್ ಲಾಕ್, ಕಿಸ್ಸಿಂಗ್ ಫೋಟೋಗಳನ್ನು ತಾನೇ ಹೊರಬಿಟ್ಟಿದ್ದಾಳೆ. ಮುಂಬೈನಲ್ಲಿ ದೀಪಾವಳಿ ಆಚರಣೆಗೆಂದು ಹೋದಾಗ ಈ ಫೋಟೋ ತೆಗೆಸಿಕೊಂಡಿದ್ದಾಳಂತೆ. ಮದುವೆಯಾದಮೇಲೂ ಸುದ್ದಿಯಲ್ಲಿರಬೇಕು ಅಂತಾ ಸ್ವತಃ ಶ್ರೇಯಾ ಹೀಗೆ ಗಂಡನ ಜೊತೆಗಿನ ಫೋಟೋಗಳನ್ನು ಹರಿಯಬಿಡುತ್ತಿದ್ದಾಳಾ ಅಂತೊಂದು ಅನುಮಾನ ಶುರುವಾಗಿದೆ.
ಅದೇನೇ ಇರಲಿ, ಹೊಗಳಿಕೆ ತೆಗಳಿಕೆಗಳ ಮಧ್ಯೆ ಶ್ರೇಯಾಳ ಮೈಮಾಟವನ್ನು ಜನ ಎಂಜಾಯ್ ಮಾಡುತ್ತಿರೋದು ಮಾತ್ರ ಸತ್ಯ!

ಇನ್ನಷ್ಟು ಓದಿರಿ

Scroll to Top