ಮಂಗಳವಾರ ರಜಾದಿನ ಅಂದವರು ಹಾಡಿನಲ್ಲಿ ಕೂಳೆ ಕೊಟ್ಟರು!

Picture of Cinibuzz

Cinibuzz

Bureau Report

ತ್ರಿವರ್ಗ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಮಂಗಳವಾರ ರಜಾದಿನ‘ ಚಿತ್ರದ ಮೊದಲ ವಿಡಿಯೋ ಹಾಡು ಇಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಿಗ್‌ಬಾಸ್ ಖ್ಯಾತಿಯ ಚಂದನ್ ಆಚಾರ್, ಲಾಸ್ಯ ನಾಗರಾಜ್, ರಜನಿಕಾಂತ್ ಹಾಗೂ ನಂದನ್ ರಾಜ್ ಈ ಹಾಡಿನಲ್ಲಿ ಪಾಲ್ಗೊಂಡಿದ್ದಾರೆ. “ಗೀವಿಂಗ್ ಕೂಳೆ ಎಂದು ಆರಂಭವಾಗುವ ಈ ಹಾಡು ವಿಶೇಷವಾಗಿಯೂ, ವಿನೂತನವಾಗಿಯೂ ಕೇಳಿಸುತ್ತಿದೆ. ಈ ಹಾಸ್ಯಭರಿತ ಗೀತೆಯನ್ನು ಯುವಿನ್ ಅವರು ಬರೆದು, ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಸ್ಪೆಷಲ್ ಕಾರೊಂದನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಖ್ಯಾತ ಗಾಯಕ ನವೀನ್ ಸಜ್ಜು ಈ ಹಾಡನ್ನು ಹೊಸ ಬಗೆಯಲ್ಲಿ ಹಾಡಿದ್ದಾರೆ. ಯುವಿನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ೪೫ ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರದ ಪ್ರಥಮಪ್ರತಿ ಸಹ ಸಿದ್ದಾವಾಗಿದೆ.

ಕ್ಷೌರಿಕನ ಸುತ್ತ ಹೆಣೆಯಲಾದ ಈ ಚಿತ್ರ ಹಾಸ್ಯಭರಿತ, ಕೌಟುಂಬಿಕ ಕಥಾಹಂದರವನ್ನು ಹೊಂದಿದೆ. ಕ್ಷೌರಿಕನ ಪಾತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯಿಸಿದ್ದಾರೆ. ಲಾಸ್ಯ ನಾಗರಾಜ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಹಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಡಾ||ವಿ.ನಾಗೇಂದ್ರಪ್ರಸಾದ್, ಯುವಿನ್ ಹಾಡುಗಳನ್ನು ರಚಿಸಿದ್ದಾರೆ. ಋತ್ವಿಕ್ ಮುರಳಿಧರ್ ಹಿನ್ನಲೆ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top