ಬಂತು ನೋಡಿ ಆಸಿಂಕೋಜ಼ಿಲ್ಲ!

Picture of Cinibuzz

Cinibuzz

Bureau Report

ಶ್ರೀ ಮಾರುತಿ ಮೂವಿ ಮೇಕರ‍್ಸ್ ಲಾಂಛನದಲ್ಲಿ ಸೋಮಶೇಖರ್ ಶೆಟ್ಟಿ ನಿರ್ಮಿಸಿರುವ ಆಸಿಂಕೋಜ಼ಿಲ್ಲ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ವಿಜ್ಞಾನಿಯೊಬ್ಬ ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಯೋಚಿಸಿ ಕಾಡಿಗೆ ಹೋಗಿ ಹೊಸ ಸಾಹಸವನ್ನು ಮಾಡುತ್ತಾನೆ. ಇದೇ ಸಮಯದಲ್ಲಿ ಆತನ ಜೊತೆಗೆ ಇನ್ನು ೪ ಜನ ವಿಶೇಷ ವ್ಯಕ್ತಿಗಳು ಸೇರಿಕೊಳ್ಳುತ್ತಾರೆ. ಅಲ್ಲಿಗೆ ಶಾಲಾ ವಿದ್ಯಾರ್ಥಿನಿಯೊಬ್ಬಳು ಅಪಹರಣಕ್ಕೊಳಗಾಗಿ ಕಾಡಿಗೆ ಬರುತ್ತಾಳೆ. ಮುಂದೆ ಏನಾಗುತ್ತದೆ ಎಂದು ಹೇಳುವ ಕಥಾಹಂದರವಿರುವ ಈ ಚಿತ್ರವನ್ನು ಶಮನ್ ನಿರ್ದೇಶನ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಯಾಗಿದ್ದುಕೊಂಡು, ಚಿತ್ರರಂಗಕ್ಕೆ ಬಂದ ಅಸಂಖ್ಯ ಜನರಲ್ಲಿ ಈ ಚಿತ್ರದ ನಿರ್ದೇಶಕ ಶಮನ್ ಕೂಡಾ ಒಬ್ಬರು. ಹೇಗೆ ಉಪ್ಪಿ ಯಾರೂ ಊಹಿಸಲೂ ಸಾಧ್ಯವಾಗದ ಪಾತ್ರಗಳನ್ನು ಸೃಷ್ಟಿಸಿ ಸೈ ಅನ್ನಿಸಿಕೊಂಡರೋ, ಹಾಗೇ ತಾನು ಕೂಡಾ ಇಡೀ ಚಿತ್ರರಂಗ ತಿರುಗಿ ನೋಡುವಂತಾ ಸಿನಿಮಾ ಮಾಡಬೇಕು ಅನ್ನೋ ಹಂಬಲ ಶಮನ್ ಅವರಿಗಿತ್ತಂತೆ. ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಆಸಿಂಕೋಜ಼ಿಲ್ಲ ಚಿತ್ರವನ್ನು ರೂಪಿಸಿದ್ದಾರೆ.

ಈ ವರೆಗೆ ಯಾರೂ ಇಡದ ಹೆಸರನ್ನು ಈ ಚಿತ್ರಕ್ಕೆ ಶೀರ್ಷಿಕೆಯನ್ನಾಗಿ ಇಟ್ಟಿರುವುದೇ ಈ ಚಿತ್ರದ ಬಗ್ಗೆ ಎಲ್ಲರೂ ತಿರುಗಿನೋಡಲು ಕಾರಣವಾಗಿದೆ. ಇದು ಈ ಚಿತ್ರದಲ್ಲಿ ಬರುವ ಯಾವುದಾದರೂ ಪಾತ್ರವಾ? ಅಥವಾ ಯಾವುದಾದರೂ ಪ್ರಾಣಿಯ ಹೆಸರಾ? ಅಥವಾ ಅದನ್ನೂ ಮೀರಿದ ಜೀವಿಗಳನ್ನು ಈ ಸಿನಿಮಾದಲ್ಲಿ ಪರಿಚಯಿಸಲಾಗುತ್ತಿದೆಯಾ? ಇವೆಲ್ಲಾ ಕುತೂಹಲದ ಪ್ರಶ್ನೆಗಳಿಗೆ ಇನ್ನೇನು ಉತ್ತರ ಸಿಗಲಿದೆ!

ಚಿತ್ರಕ್ಕೆ ಅಮೋಘವರ್ಷ ಸಂಗೀತ, ಮಂಜುನಾಥ್ ಹೆಗ್ಡೆ, ಸಚಿನ್ ತಿರುಮಲ ಛಾಯಾಗ್ರಹಣ, ಮಂಜುನಾಥ್ ಕೆ.ಸಿ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ, ವಿನಯ್‌ಕುಮಾರ್ ಕೂರ್ಗು ಸಂಕಲನವಿದೆ. ಭಾನುಪ್ರಿಯ ಶೆಟ್ಟಿ, ಹೊನ್ನಾವಳ್ಳಿ ಕೃಷ್ಣ, ಪ್ರಶಾಂತ್, ವಿನಯ್ ಚಂದ್ರು ಛತ್ರಪತಿ, ತಾರಖ್, ರಕ್ಷಿಕ, ಸೋನಂರಾಯ್, ಮೇಘನಶ್ರೀ, ತಿಮ್ಮೇಗೌಡ ಇನ್ನು ಮುಂತಾದವರು ಅಭಿನಯಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top