ಕಿರುತೆರೆಯಿಂದ ಬಂದು ಕಳೆದ ನಾಲ್ಕೈದು ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿರುವವರು ಡಾರ್ಲಿಂಗ್ ಕೃಷ್ಣ. ಈ ಸಲ ಸ್ವತಃ ತಾವೇ ನಿರ್ದೇಶನವನ್ನೂ ಮಾಡಿ ಲವ್ ಮಾಕ್ಟ್ರೈಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಕುತೂಹಲ ಕೆರಳಿಸುವ ಅಂಶಗಳಿವೆ ಅನ್ನೋದು ಈಗಾಗಲೇ ಜಾಹೀರಾಗಿದೆ. ನಾಲ್ಕಾರು ಹಣ್ಣುಗಳ ಮಿಶ್ರಣದ ರಸವನ್ನು ಮಾಕ್ಟೇಲ್ ಅನ್ನುತ್ತಾರಲ್ಲಾ? ಹಾಗೆಯೇ ಈ ಸಿನಿಮಾದ ಕತೆಯಲ್ಲಿ ಮೂರು ಘಟ್ಟದ ಪ್ರೀತಿ ಸನ್ನಿವೇಶಗಳು ಬರುತ್ತವಂತೆ. ಹೀಗಾಗಿ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ಕಾಲೇಜು, ಯೌವ್ವನ ಮತ್ತು ಜವಬ್ದಾರಿ ಹುಡುಗನಾಗಿ ಕೃಷ್ಣ ನಾಯಕ ಮತ್ತು ನಿರ್ದೇಶಕನಾಗಿ ಹೊಸ ಅನುಭವ. ಕೊನೇ ಶೇಡ್‌ನಲ್ಲಿ ಬರುವ ಮಿಲನ ನಾಗರಾಜ್ ನಾಯಕಿ. ಶಾಲೆಯಲ್ಲಿ ಬರುವ ಸನ್ನಿವೇಶದಲ್ಲಿ ಆಂಧದ ಕನ್ನಡತಿ ರಚನಾ, ಡ್ಯಾನ್ಸರ್ ಧನುಷ್ ಪ್ರಣಾಮ್. ಕಾಲೇಜು ಲವ್ ಸ್ಟೋರಿಯಲ್ಲಿ ಅಮೃತ ಅಯ್ಯಂಗಾರ್ ಈಗಿನ ಹುಡುಗಿಯರು ಏನು ಬೇಕು, ಬೇಡಎಂಬುದನ್ನುತೋರಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಗೆಳಯನಾಗಿ ಮೈಸೂರು ರಂಗಭೂಮಿ ಪ್ರತಿಭೆ ಅಭಿಲಾಷ್, ಜೊತೆಗೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ರಾಘವೇಂದ್ರ ಕಾಮತ್-ಅರುಣ್‌ಕುಮಾರ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರಘುದೀಕ್ಷಿತ್ ಸಂಗೀತವಿದೆ.ಶ್ರೀಕ್ರೇಜಿ ಮೈಂಡ್ಸ್ ಸಂಕಲನದ ಜೊತೆಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಕಳಸ, ಮೈಸೂರು, ಉಡುಪಿದಲ್ಲಿ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕೃಷ್ಣ-ಮಿಲನನಾಗರಾಜ್ ಜಂಟಿಯಾಗಿ ಹಣ ಹೊಂದಿಸಿಕೊಂಡು ನಿಗದಿತ ಬಜೆಟ್ಟಿನಲ್ಲಿ ನಿರ್ಮಾಣ ಮಾಡಿರುವುದು ವಿಶೇಷ. ಅದಕ್ಕಾಗಿ ಎಲ್ಲಾ ಕೆಲಸವನ್ನು ತಾವೇ ನಿಭಾಯಿಸಿ, ಕಲಾವಿದರು ಸೆಟ್ಟಿನಲ್ಲಿ ಸೈಕೆಲ್ ಹೊಡೆಯದಂತೆ, ಮುಂಚಿತವಾಗಿ ಮೂವತ್ತು ದಿನಗಳ ಕಾಲ ತಾಲೀಮು ನಡೆಸಿ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರಂತೆ. ಕೃಷ್ಣ ಟಾಕೀಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರ ಜಾಕ್ ಮಂಜು ಅವರ ಮೈಸೂರ್ ಟಾಕೀಸ್ ಮುಖಾಂತರ ತೆರೆಗೆ ಬರುತ್ತಿದೆ.
ಲವಲವಿಕೆಯ ಲವ್ ಮಾಕ್ಟೇಲ್!
Cinibuzz
Bureau Report
ಇನ್ನಷ್ಟು ಓದಿರಿ











































