ಇಲ್ಲಿಂದ ವಿಹಾನ್ ಇಮೇಜು ಬದಲಾಗುತ್ತಾ?

Picture of Cinibuzz

Cinibuzz

Bureau Report

ಗ್ರೇಟ್ ಬ್ರೋಸ್ ಪಿಕ್ಚರ‍್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಸಿನಿಮಾ ‘ಲೆಗಸಿ’. ಯೋಗರಾಜ ಭಟ್ಟರ ಪಂಚತಂತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸಿರುವ ವಿಹಾನ್ ಅವರ ಹೊಸ ಚಿತ್ರ ಇದಾಗಿದೆ. ಸುಭಾಷ್ ಚಂದ್ರ ನಿರ್ದೇಶನದ ಮೊದಲ ಸಿನಿಮಾ ‘ಲೆಗಸಿ’ಯ ಫಸ್ಟ್ ಲುಕ್ ಈಗ ಹೊರಬಂದಿದೆ.

ಇಷ್ಟು ದಿನ ಲವರ್ ಬಾಯ್ ಆಗಿದ್ದ ವಿಹಾನ್ ಗೌಡಗೆ ಹೊಸ ಇಮೇಜು ತಂದುಕೊಡುವ ಸಿನಿಮಾ ಲೆಗಸಿ ಅನ್ನೋದನ್ನು ಫಸ್ಟ್ ಲುಕ್ ಸಾರಿ ಹೇಳುತ್ತಿದೆ. ಆರಂಭದಲ್ಲಿ ೧೯೯೦ ಎಂದು ಬರುತ್ತಿದ್ದಂತೇ ದೊಡ್ಡ ಬಂಗಲೆಯೊಂದು ರಿವೀಲ್ ಆಗುತ್ತದೆ. ಕೈಲಿ ಗನ್ನು,  ಆಯುಧ, ತೋಳಿನಿಂದ ಇಳಿಯುವ ರಕ್ತ ಜೊತೆಗೆ ಡಾನ್ ಥರಾ ಕುಳಿತಿರುವ ಭಂಗಿ – ಹೀಗೆ ಮೋಷನ್ ಪೋಸ್ಟರಿನಲ್ಲಿ ಕುತೂಹಲ ಮೂಡಿಸುವ ಎಲಿಮೆಂಟುಗಳು ಅನಾವರಣಗೊಂಡಿವೆ.

೧೯೯೦ರಿಂದ ೨೦೧೯ರವರೆಗೆ ನಡೆಯುವ ಬರಹಗಾರನೊಬ್ಬನ ಜೀವನ ಹಾಗೂ ಆತನ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಆಕ್ಷನ್, ಥ್ರಿಲ್ಲರ್ ಕಥೆಯ ಮೂಲಕ ನಿರ್ದೇಶಕರು ಹೇಳಲಿದ್ದಾರೆ. ಪ್ರೀತಿಯ ಜೊತೆ ತಂದೆ-ಮಗನ ಸೆಂಟಿಮೆಂಟ್ ಕಥೆ ಕೂಡ ಈ ಚಿತ್ರದಲ್ಲಿದೆ. ತಂದೆಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಅನ್ನೋ ವಿಚಾರವಿನ್ನೂ ಗೌಪ್ಯವಾಗಿದೆ. ಕಳೆದ ಜನವರಿಯಲ್ಲಿ ಶೂಟಿಂಗ್ ಆರಂಭಿಸಿ ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ, ಹಾಗೂ ರಾಮನಗರದ ಸುತ್ತಮುತ್ತ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಈಗ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.

ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಎಂ.ಸುಭಾಷ್‌ಚಂದ್ರ ‘ಲೆಗಸಿ’ಯ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ವಿಹಾನ್ ನಾಯಕನಾಗಿರುವ ಈ ಚಿತ್ರಕ್ಕೆ ಸುರೇಶ್ ರಾಜ್ ಸಂಗೀತ, ಸುಂದರ್ ಪಿ ಛಾಯಾಗ್ರಹಣ, ಶಿವ-ಪ್ರೇಮ್ ಸಾಹಸ, ಸುನಿಲ್ ಎಸ್.ಎಲ್.ಆರ್. ಸಂಕಲನ, ಜಯಂತ್ ಕಾಯ್ಕಿಣಿ ಮತ್ತು ಡಾ. ವಿ. ನಾಗೇಂದ್ರಪ್ರಸಾದ್ ಅವರ ಗೀತಸಾಹಿತ್ಯವಿದೆ.

ಇನ್ನಷ್ಟು ಓದಿರಿ

Scroll to Top