ಮತ್ತೊಂದು ಕುತೂಹಲಭರಿತ ಟ್ರೇಲರ್ ರಿಲೀಸ್ ಮಾಡಿದ‌ ರಾಂಧವ!

Picture of Cinibuzz

Cinibuzz

Bureau Report

ಯಾವುದಾದರೂ ನಟ ನಟಿಯರ ಚೊಚ್ಚಲ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಹೈಪ್ ಇರುತ್ತದೆ. ಅದರಲ್ಲೂ ಕಿರುತೆರೆಯಲ್ಲಿ ಫೇಮಸ್ ಆಗಿ ಹಿರಿತೆರೆಗೆ ಬಂದರಂತೂ ಕೇಳ್ಬೇಕೆ. ನಿರೀಕ್ಷೆ ಮತ್ತಷ್ಟು ಹೆಚ್ಚಾಗಿಯೇ ಇರುತ್ತದೆ. ಆಗಸ್ಟ್ 23ಕ್ಕೆ ಬಿಡುಗಡೆಯಾಗಲಿರುವ ರಾಂಧವ ಚಿತ್ರವೂ ಅದೇ ಹಾದಿಯಲ್ಲಿದೆ.

ಬಿಗ್ ಬಾಸ್ ಖ್ಯಾತಿಯ ಲವರ್ ಬಾಯ್ ಭುವನ್ ಪೊನ್ನಣ್ಣ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ರಾಂಧವ ಚಿತ್ರವನ್ನು ಸುನೀಲ್ ಆಚಾರ್ಯ ನಿರ್ದೇಶನ ಮಾಡಿದ್ದಾರೆ‌. ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಸನತ್ ಕುಮಾರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಟೀಸರ್, ಟ್ರೇಲರ್, ವಿಡಿಯೋ ಸಾಂಗುಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ರಾಂಧವ ಮತ್ತೊಂದು ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಕುತೂಹಲ ಹುಟ್ಟು ಹಾಕಿದೆ‌. ಇಲ್ಲಿಯವರೆವಿಗೂ ರಿಲೀಸ್ ಆದ ಟ್ರೇಲರ್, ಟೀಸರ್ ಸಿನಿಮಾದ ಕುರಿತು ಸಾಕಷ್ಟು ರಹಸ್ಯವನ್ನು ಕಾಯ್ದುಕೊಂಡಿತ್ತು. ಆದರೆ ಹೊಸ ಟ್ರೇಲರ್ ರಾಂಧವ ಚಿತ್ರದ ಕ್ಲಿಯರ್ ಇಮೇಜನ್ನು ನೀಡಿ ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯೂ ಆಗಿದೆ. ಭೂತದ ಗೂಬೆಯನ್ನು ಹುಡುಕಿಕೊಂಡು ಒಡೆಯನ ಸಮುದ್ರದ ಸಂಸ್ಥಾನದ ಕಡೆ ಹೊರಟ ನಾಯಕ ರಾಬರ್ಟ್ ಭೂತದ ಗೂಬೆಯನ್ನು ಹುಡುಕುವ ಜತೆಗೆ ತನ್ನ ಜನ್ಮಾಂತರದ ರಹಸ್ಯವನ್ನು ತಿಳಿದ ರಾಬರ್ಟ್ ಏನು ಮಾಡುತ್ತಾನೆ. ಆ ಜನ್ಮಾಂತರದ ಕಥೆ ಏನು… ಹೇಗೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಆಗಸ್ಟ್ 23ಕ್ಕೆ…

ಇನ್ನಷ್ಟು ಓದಿರಿ

Scroll to Top