ಲಾಲ್ ಕಫ್ತಾನ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!

Picture of Cinibuzz

Cinibuzz

Bureau Report

ಬಾಲಿವುಡ್ ನಟ ಸೈಫ್ ಆಲಿಖಾನ್ ಅವರಿಗಿಂದು 49ನೇ ಹುಟ್ಟುಹಬ್ಬದ ಸಂಭ್ರಮ. ಸದ್ಯ ಸೈಫ್ ಆಲಿಖಾನ್ ಜವಾನಿ ಜಾನೆಮನ್ ಮತ್ತು ಲಾಲ್ ಕಪ್ತಾನ್ ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದು ಲಾಲ್ ಕಫ್ತಾನ್ ಚಿತ್ರತಂಡದಿಂದ ಸೈಫ್ ಗೆ ಹುಟ್ಟುಹಬ್ಬದ ಗಿಫ್ಟ್ ದೊರೆತಿದೆ.

ಯೆಸ್.. ಸೈಫ್ ಹುಟ್ಟುಹಬ್ಬದ ಪ್ರಯುಕ್ತ ಲಾಲ್ ಕಫ್ತಾನ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಒಬ್ಬ ನಾಗಾ ಸಾಧು ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. 48 ಸೆಕೆಂಡ್ ನ ಟೀಸರ್ ಇದಾಗಿದ್ದು, ಸೈಫ್ ಅಲಿ ಖಾನ್ ಭಯಂಕರ ಗೆಟಪ್ ನಲ್ಲಿ ಮಿಂಚಿದ್ದಾರೆ. ಲಾಲ್ ಕಫ್ತಾನ್ ಇದೇ ಅಕ್ಟೋಬರ್ 11 ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.

ಇನ್ನಷ್ಟು ಓದಿರಿ

Scroll to Top