ಬಾಲಿವುಡ್ ಹಿರಿಯ ನಟಿ ವಿದ್ಯಾ ಸಿನ್ಹಾ ನಿಧನ!

Picture of Cinibuzz

Cinibuzz

Bureau Report

ಸಾಕಷ್ಟು ದಿನಗಳಿಂದ ಶ್ವಾಸಕೋಶ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟಿ ವಿದ್ಯಾ ಸಿನ್ಹಾ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಸ ತೊಂದರೆಯಿಂದ ಬಳಲುತ್ತಿದ್ದ ವಿದ್ಯಾ ಸಿನ್ಹಾ ಅವರು ಮುಂಬೈನ ಕ್ರಿಟಿಕೇರ್​ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇತ್ತೀಚಿಗೆ ಸಾವನ್ನಪ್ಪಿದ್ದಾರೆ. ಜುಲೈ 10ರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿನ್ಹಾ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕುಟುಂಬದಲ್ಲೇ ಸಿನ್ಹಾ ಜನಿಸಿದ್ದರು. ಅವರ ತಂದೆ ಪ್ರತಾಪ್​ ರಾಣಾ ಸಿನಿಮಾ ನಿರ್ಮಾಪಕರಾಗಿದ್ದರು. ಸಿನ್ಹಾ ತಮ್ಮ 18ನೇ ವಯಸ್ಸಿನಲ್ಲೇ ಮಾಡೆಲಿಂಗ್​ ಕ್ಷೇತ್ರದಲ್ಲಿ ಮಿಂಚಿ ಬಳಿಕ ಹಲವಾರು ಹಿಟ್​ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ರಜನಿ ಗಂಧ, ಚೋಟಿ ಸಿ ಬಾತ್, ಪತಿ, ಪತ್ನಿ ಔರ್ ವೋ ಚಿತ್ರಗಳು ಇವರಿಗೆ ಹೆಸರು ತಂದು ಕೊಟ್ಟಿದ್ದವು. 2011 ರಲ್ಲಿ ತೆರೆಕಂಡ ಬಾಡಿಗಾರ್ಡ್ ಸಿನಿಮಾದಲ್ಲೂ ಕೂಡ ಸಿನ್ಹಾ ನಟಿಸಿದ್ದರು. ಅಷ್ಟೇ ಅಲ್ಲದೇ, ಟಿವಿ ಶೋಗಳಲ್ಲೂ ವಿದ್ಯಾ ಸಿನ್ಹಾ ಕಾಣಿಸಿಕೊಂಡಿದ್ದರು. ಏಕ್ತಾ ಕಪೂರ್ ರ ಕಾವ್ಯಾಂಜಲಿ, ಕುಲ್ಫಿ ಕುಮಾರ್ ಬಾಜೇವಾಲಾ ಸೀರಿಯಲ್ ನಲ್ಲಿಯೂ ಸಿನ್ಹಾ ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಓದಿರಿ

Scroll to Top