ಶಬಾನಾ ಅಜ್ಮಿ ಜತೆ ನಟಿಸಲಿದ್ದಾರೆ ಸ್ವರಾ ಭಾಸ್ಕರ್!

Picture of Cinibuzz

Cinibuzz

Bureau Report

ಫರಾಜ್ ಆರಿಫ್ ಅನ್ಸಾರಿ ನಿರ್ದೇಶನದ ಶೀರ್ ಖುರ್ಮಾ ಸಿನಿಮಾದಲ್ಲಿ ನಟಿ ಸ್ವರಾ ಭಾಸ್ಕರ್ ಹಿರಿಯ ನಟಿ ಶಬಾನಾ ಅಜ್ಮಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಜೋಡಿ ಚೊಚ್ಚಲ ಬಾರಿಗೆ ಒಟಟಿಗೆ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ಸಮಯದಲ್ಲಿ ತಮ್ಮಿಬ್ಬರ ಬಾಂಧವ್ಯದ ಕುರಿತಾಗಿ ಸ್ವರಾ ಮಾತನಾಡಿದ್ಧಾರೆ.

ಫರಾಜ್‌ ಆರಿಫ್‌ ಅನ್ಸಾರಿ ನಿರ್ದೇಶನದ ಶೀರ್‌ ಖುರ್ಮಾ ಸಿನಿಮಾದಲ್ಲಿ ನಟಿ ಸ್ವರಾ ಭಾಸ್ಕರ್‌ ಹಿರಿಯ ನಟಿ ಶಬಾನಾ ಅಜ್ಮಿ ಜೊತೆ ನಟಿಸುತ್ತಿದ್ದಾರೆ. ಇವರಿಬ್ಬರು ಇದೇ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿದ್ದು, ಚಿತ್ರೀಕರಣದ ಸಂದರ್ಭದಲ್ಲಿ ತಮ್ಮಿಬ್ಬರ ಬಾಂಧವ್ಯದ ಬಗ್ಗೆ ಸ್ವರಾ ಮಾತನಾಡಿದ್ದಾರೆ. ‘ಶಬಾನಾ ಅವರ ಸಾಧನೆಯಲ್ಲಿ ಶೇಕಡ 25ರಷ್ಟು ನಾನು ಸಾಧನೆ ಮಾಡಿದರೂ ಅದು ನನ್ನ ದೊಡ್ಡ ಅದೃಷ್ಟ. ಹಿರಿಯ ನಟಿಯಾದರೂ ಕಿರಿಯರನ್ನು ಗೌರವ ಅಭಿಮಾನದಿಂದ ಕಾಣುತ್ತಾರೆ. ಸಿನಿಮಾ ಆಯ್ಕೆಯಲ್ಲಿ ಅವರು ನನಗೆ ಪ್ರೇರಣೆ’ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಶಬಾನಾ ಅಜ್ಮಿತಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಸ್ವರಾ ಭಾಸ್ಕರ್‌ ಅಥವಾ ದಿವ್ಯಾ ದತ್ತಾ ಅವರಲ್ಲಿ ಯಾರ ಅಮ್ಮನಾಗಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಹೇಳಿಲ್ಲ.

ಇನ್ನಷ್ಟು ಓದಿರಿ

Scroll to Top