ಕೆಜಿಎಫ್ 2 ಬಳಗಕ್ಕೆ ಟಾಲಿವುಡ್ ನಟನ ಎಂಟ್ರಿ!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ನ ಇತ್ತೀಚಿನ ಬಹಳಷ್ಟು ಸಿನಿಮಾಗಳು ಪರಭಾಷೆಗಳ ನಟ ನಟಿಯರನ್ನು ಅತಿಥಿ ಪಾತ್ರಗಳಾಗಿ ನಟಿಸುವುದಕ್ಕೆ ಅವಕಾಶ ಕೊಡುವ ಮೂಲಕ ಕರ್ನಾಟಕದಲ್ಲಿರುವ  ಪರಭಾಷಿಗರು ಕನ್ನಡ ಸಿನಿಮಾವನ್ನು ನೋಡುವಂತೆ ಪ್ರೇರೇಪಿಸಲಾಗುತ್ತಿದೆ. ಸದ್ಯ ಕೆಜಿಎಫ್  ಬಳಿಕ ರಾಕಿಂಗ್ ಸ್ಟಾರ್ ಕೆಜಿಎಫ್ 2 ಸಿನಿಮಾ  ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಎಲ್ಲೆಡೆ ಕೆಜಿಎಫ್ 2 ಹವಾ ಎದ್ದಿದೆ. ಈಗಾಗಲೇ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್, ಉಪೇಂದ್ರ ಖ್ಯಾತಿಯ ರವೀನ ಟಂಡನ್ ಇರಲಿದ್ದಾರೆ ಎಂಬುದು ನಿಕ್ಕಿಯಾಗಿದೆ. ಇದೀಗ ಟಾಲಿವುಡ್ ನ ಖ್ಯಾತ ಪೋಷಕ ನಟ ರಾವ್ ರಮೇಶ್ ಸಹ ಕೆಜಿಎಫ್ 2 ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.

ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಲಿದ್ದು, ಆಗಸ್ಟ್ ವೇಳೆಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಇತ್ತೀಚೆಗಷ್ಟೇ ಚಿತ್ರೀಕರಣಕ್ಕೆ ಚಾಲನೆ ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರದ ಸಣ್ಣ ಪುಟ್ಟ ಸೀನ್ ಗಳನ್ನು ಸೆರೆಹಿಡಿಯುತ್ತಿದ್ದಾರೆ. ಅಂದ ಹಾಗೆ, ನಿಖಿಲ್​ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದಲ್ಲಿ ನಟಿಸುವ ಮೂಲಕ ರಾವ್ ರಮೇಶ್ ಈಗಾಗಲೇ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top