ಏಕ್ ಲವ್ ಯಾ ಸ್ಟಾರ್ಟ್ ಆಯ್ತು!

Picture of Cinibuzz

Cinibuzz

Bureau Report

ದಿ ವಿಲನ್ ಸಿನಿಮಾದ ನಂತರ ಜೋಗಿ ಪ್ರೇಮ್ ರಕ್ಷಿತಾ ಸಹೋದರನಿಗಾಗಿ ಆ್ಯಕ್ಷನ್ ಕಟ್ ಹೇಳುತ್ತಿರುವ ಏಕ್ ಲವ್ ಯಾ ಶೂಟಿಂಗ್ ಸ್ಟಾರ್ಟ್ ಆಗಿದೆ. ಈಗಾಗಲೇ  ವಿಭಿನ್ನ ಟೈಟಲ್​ ಹಾಗೂ ಟೀಸರ್​ನಿಂದಲೇ ಗಮನ ಸೆಳೆದಿರೋ ಈ ಚಿತ್ರದಲ್ಲಿ ರಾಣಾ ಅನ್ನೋ ರೋಲ್​ನಲ್ಲಿ ಅಭಿಷೇಕ್ ಮಿಂಚಲಿದ್ದಾರೆ.

ಇದೊಂದು ಪಕ್ಕಾ ಲವ್ ಕಂ ಆ್ಯಕ್ಷನ್ ಸಿನಿಮಾವಾಗಿದ್ದು ಚಿತ್ರದ ಮೊದಲ ಶೆಡ್ಯೂಲ್ ಭರ್ಜರಿ ಆಕ್ಷನ್​ನಿಂದ ಕೂಡಿರಲಿದೆ. ಈಗಾಗಲೇ ಆ್ಯಕ್ಷನ್ ಸೀನ್​ಗಾಗಿ ಅದ್ಧೂರಿ ಸೆಟ್ ಹಾಕಲಾಗಿದೆ.  ಮಾಸ್ ಅಂಡ್ ಲವ್​ ಮದರ್ ಸೆಂಟಿಮೆಂಟ್​ ಸಿನಿಮಾಗಳಿಂದಾಗಿ ಪ್ರೇಕ್ಷಕರಿಂದ ಪುಲ್ ಮಾರ್ಕ್ಸ್ ಪಡೆದಿರುವು ಪ್ರೇಮ್, ಮೊದಲ ಬಾರಿಗೆ ಭಾಮೈದುನನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ರಕ್ಷಿತಾ ಪ್ರೇಮ್ ಬಂಡವಾಳ ಹೂಡಿದ್ದಾರೆ.

 

 

 

ಇನ್ನಷ್ಟು ಓದಿರಿ

Scroll to Top