ಮಾವನ ಮೇಲೆ ಸೊಸೆ ಗರಂ!

Picture of Cinibuzz

Cinibuzz

Bureau Report

ಬಾಲಿವುಡ್ ಹಾಟ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಾವ ಅಮಿತಾಭ್ ಬಚ್ಚನ್ ಮೇಲೆ ಗರಂ ಆಗಿದ್ದಾರೆ. ಹೌದು ಅಮಿತಾಭ್ ತಮ್ಮ ಹೊಸ ಸಿನಿಮಾ ಚೆಹರೆಯಲ್ಲಿ ಇಮ್ರಾನ್ ಹಶ್ಮಿ ಜತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ವಿಷಯಕ್ಕೆ ಸಿಟ್ಟಾಗಿರುವ ಐಶುಗೆ ಮಾವ ಹಶ್ಮಿ ಜತೆ ನಟಿಸುತ್ತಿರುವುದು ಬಿಲ್ ಕುಲ್ ಇಷ್ಟವಿಲ್ಲವಂತೆ.

ಇಮ್ರಾನ್ ಹಶ್ಮಿ ಈ ಹಿಂದೆ ಟಾಕ್ ಶೋವೊಂದರಲ್ಲಿ ಐಶು ಜೊತೆಗೆ ನಟಿಸಲು ಇಷ್ಟವಿಲ್ಲವೆಂದು ಮುಕ್ತವಾಗಿ ಹೇಳಿಕೊಂಡಿದ್ದರು. ಅಲ್ಲದೇ ಐಶ್ವರ್ಯಾ ರೈ ಅವರನ್ನು ಫೇಕ್ ಮತ್ತು ಪ್ಲಾಸ್ಟಿಕ್ ಎಂದು ಕೆಟ್ಟದಾಗಿಯೂ ಕಮೆಂಟ್ ಮಾಡಿದ್ದರು. ಈ ಬಗ್ಗೆ ‍ಐಶು ಬಹಳವಾಗಿ ನೊಂದುಕೊಂಡಿದ್ದರು ಕೂಡ. ಇನ್ನು ಕರಣ್ ಜೋಹರ್ ಶೋನಲ್ಲಿ ತಾವು ಮಾತನಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಹಶ್ಮಿ, ಐಶ್ವರ್ಯಾ ಅವರನ್ನು ಕ್ಷಮೆಯಾಚಿಸುವುದಾಗಿಯೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಮಿತಾಭ್ ಹಶ್ಮಿ ಜತೆ ನಟಿಸುವುದಕ್ಕೆ ಐಶೂ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

ಇನ್ನಷ್ಟು ಓದಿರಿ

Scroll to Top