ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ದೇವಕಿ!

Picture of Cinibuzz

Cinibuzz

Bureau Report

ಉಪೇಂದ್ರ ಮಗಳು ಐಶ್ವರ್ಯಾ ಮತ್ತು ಪ್ರಿಯಾಂಕ ಉಪೇಂದ್ರ ಅಭಿನಯದ ದೇವಕಿ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡವು ಫುಲ್ ಬ್ಯುಸಿಯಾಗಿದೆ. ವಿಶೇಷವೆಂದರೆ ಸಿನಿಮಾದ ಪೂರ್ಣ ಪ್ರಮಾಣದ ಚಿತ್ರೀಕರಣವೆಲ್ಲವೂ ಕೋಲ್ಕತ್ತದಲ್ಲಿ ನಡೆದಿದ್ದು, ಅಲ್ಲಿನ ಸ್ಥಳೀಯ ಕಲಾವಿದರನ್ನೆ ಹೆಚ್ಚಾಗಿ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ನೈಜತೆಗೆ ಹತ್ತಿರವಾಗುವಂತೆ ಸಿನಿಮಾ ಕಾಲುಭಾಗ ಬಂಗಾಳಿ ಭಾಷೆಯನ್ನೇ ಉಪಯೋಗಿಸಲಾಗಿದೆ.

ವಿದೇಶದಲ್ಲಿ ಚಿತ್ರೀಕರಣ ಮಾಡಿದ್ದರೂ, ಸಾಕಷ್ಟು ಪಾತ್ರಗಳು ಅಲ್ಲಿ ಭಾಷೆಗಿಂತ ತಾಯಿ ಭಾಷೆಯಲ್ಲಿಯೇ ಮಾತುಕತೆ ನಡೆಸುವುದನ್ನ ನಾವು ಬಹಳಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಭಾಷೆಯ ಬಗೆಗಿನ ನಿಖರತೆಯನ್ನು ಚಿತ್ರತಂಡಗಳು ನಿರ್ಲಕ್ಷ್ಯ ಮಾಡುತ್ತವೆ. ಆದರೆ ಅದರಿಂದ ದೊರೆಯಬಹುದಾದ ತೃಪ್ತಿ ಸಾಧ್ಯವಾದಷ್ಟು ಮಟ್ಟಿಗೆ ದಕ್ಕದೇ ಇರುವುದೇ ಸಿನಿಮಾದ ವಿಫಲತೆಗೆ ಮುಖ್ಯ ಕಾರಣ ಕೂಡ. ಆದರೆ ದೇವಕಿ ಚಿತ್ರಕತೆ ಆ ಎಲ್ಲ ಆರೋಪಗಳನ್ನು ಮೆಟ್ಟಿ ನಿಂತು ಯಾವುದೇ ಅಪವಾದಗಳಿಗೆ ಒಳಗಾಗದ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿದೆ ಎನ್ನುತ್ತಾರೆ ನಿರ್ದೇಶಕ ಲೋಹಿತ್. ಜೂನ್ ನಲ್ಲಿ ದೇವಕಿ ರಿಲೀಸ್ ಮಾಡುವ ಪ್ಲ್ಯಾನ್ ನಲ್ಲಿ ನಿರ್ದೇಶಕರಿದ್ದು, ಆ ಮೊದಲು ಚಿತ್ರದ ಆಡಿಯೋ ಮತ್ತು ಟ್ರೇಲರ್ ರಿಲೀಸ್ ಮಾಡುವ ಯೋಜನೆಯಲ್ಲಿದ್ದಾರೆ.

ಇನ್ನಷ್ಟು ಓದಿರಿ

Scroll to Top