ಸಲಗಕ್ಕೆ ಪವರ್ ಕೊಟ್ಟ ಯುವರತ್ನ!

Picture of Cinibuzz

Cinibuzz

Bureau Report

ಈಗಾಗಲೇ ದುನಿಯಾ ವಿಜಯ್ ಆ್ಯಕ್ಟಿಂಗ್ ಕಮ್ ಡೈರೆಕ್ಷನ್ ಮಾಡುತ್ತಿರುವ ಸಲಗ ಸಿನಿಮಾದ ಕುರಿತಾದ ಬಹಳಷ್ಟು ವಿಚಾರಗಳು ಈಗಾಗಲೇ ಚರ್ಚೆಯಾಗುತ್ತಲೇ ಇವೆ. ಮಾಸ್ತಿ ಗುಡಿಯ ದಿಟ್ಟ ನಿರ್ಧಾರಕ್ಕೆ ಸ್ಯಾಂಡಲ್ ವುಡ್ ನ ಬಹಳಷ್ಟು ಸ್ಟಾರ್ ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ಸಲಗ ಟೀಮ್ ಗೆ ಪವರ್ ಪುಲ್ ಆಗಿ ಯುವರತ್ನ ಸಾಥ್ ಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿಸಿಕೊಂಡ ಸಲಗ ಟೀಮ್ ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭಿಸುವ ಹಂತದಲ್ಲಿದೆ. ಈ ನಡುವೆ ಪುನೀತ್ ರಾಜ್ ಕುಮಾರ್ ಅವರನ್ನು ಸಲಗ ಟೀಮ್ ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದು, ರಣವಿಕ್ರಮ್ ಸಲಗಕ್ಕೆ ಶುಭಕೋರಿದ್ದಾರೆ.

ಭೂಗತ ಜಗತ್ತಿನ ಅನಾವರಣದ ಕುರಿತಾದ ಕಥೆಯನ್ನು ಹೊಂದಿರುವ ಸಲಗಕ್ಕೆ ಟಗರು ಟೀಮ್ ಈಗಾಗಲೇ ಜತೆಯಾಗಿದ್ದಾರೆ. ಟಗರು ಸಿನಿಮಾದಲ್ಲಿ ಕೆಲಸ ಮಾಡಿದ್ದ ಬಹುತೇಕ ಎಲ್ಲರೂ ಸಲಗಕ್ಕೂ ಕೈ ಜೋಡಿಸಿರುವುದು ಸಲಗಕ್ಕೆ ಮತ್ತಷ್ಟು ಬಲ ನೀಡಿದೆ. ಸಲಗ ಸಿನಿಮಾವನ್ನು ಟಗರು ನಿರ್ಮಿಸಿದ್ದ ಕೆ.ಪಿ. ಶ್ರೀಕಾಂತ್ ಅವರೇ ನಿರ್ಮಾಣ ಮಾಡುತ್ತಿರುವುದು  ಇಲ್ಲಿ ನೆನೆಯಲೇಬೇಕಾದ ವಿಚಾರ ಕೂಡ.

ಇನ್ನಷ್ಟು ಓದಿರಿ

Scroll to Top