ಮನ್ಮಥುಡು-2ನಲ್ಲಿ ಪಂಚತಂತ್ರದ ಹುಡುಗಿ!

Picture of Cinibuzz

Cinibuzz

Bureau Report

ಇತ್ತೀಚಿಗಷ್ಟೇ ರಿಲೀಸ್ ಆದ ಯೋಗ್ ರಾಜ್ ಭಟ್ ಅವರ ಪಂಚತಂತ್ರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕನ್ನಡದ ಬೆಡಗಿ ಅಕ್ಷರಾ ಗೌಡ ಮೂಲತಃ ಕರ್ನಾಟಕದವರಾದರೂ  ಹೆಚ್ಚಾಗಿ ಬಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಹಿಂದಿ ಮತ್ತು ತಮಿಳು ಸಿನಿಮಾಗಳ ಮೂಲಕ ಮಿಂಚುತ್ತಿದ್ದ ಅಕ್ಷರಾ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪಂಚತಂತ್ರದ ಸಕ್ಸಸ್ ನ ನಂತರ ಅಕ್ಷರಾ ಟಾಲಿವುಡ್ ಗೆ ಅಟೆಂಡೆನ್ಸ್ ಹಾಕಲಿದ್ದಾರೆ. ಈಗಾಗಲೇ ತಮಿಳು, ಹಿಂದಿ, ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಅಕ್ಷರಾ ಮೊದಲ ಬಾರಿಗೆ ಟಾಲಿವುಡ್ ಮಂದಿಯನ್ನುರಂಜಿಸಲು ರೆಡಿಯಾಗುತ್ತಿದ್ದಾರೆ.

ಸದ್ಯ ಟಾಲಿವುಡ್ ನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಅಭಿನಯದ ಮನ್ಮಥುಡು 2 ಸಿನಿಮಾದಲ್ಲಿ ಅಕ್ಷರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2002ರಲ್ಲಿ ರಿಲೀಸ್ ಆಗಿದ್ದ ಮನ್ಮಥುಡು ಚಿತ್ರದ ಸೀಕ್ವೆಲ್ ಇದಾಗಿದ್ದು, ಟಾಲಿವುಡ್ ನಲ್ಲಿ ಒಂದು ಮಟ್ಟಿನ ಹವಾ ಎಬ್ಬಿಸಿದೆ. ‘ಮನ್ಮಥುಡು-2’ ಚಿತ್ರದಲ್ಲಿ  ರಾಹುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿರುವ ಅಕ್ಷರಾ ಸಖತ್  ಗ್ಲಾಮರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯದಲ್ಲೇ ಅಕ್ಷರಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಇನ್ನಷ್ಟು ಓದಿರಿ

Scroll to Top