ಮತ್ತೊಮ್ಮೆ ರೀ ಕ್ರಿಯೇಟ್ ಆಗಲಿದೆ ಮುಕ್ಕಾಲಾ ಮುಕಾಬುಲಾ ಸಾಂಗ್!

Picture of Cinibuzz

Cinibuzz

Bureau Report

ಬಾಲಿವುಡ್ ನೃತ್ಯ ಸಂಯೋಜಕ ಪ್ರಭು ದೇವ್ ತಾವು ನಿರ್ದೇಶಿಸಲಿರುವ ‘ಸ್ಟ್ರೀಟ್ ಡಾನ್ಸರ್’ ಸಿನಿಮಾದಲ್ಲಿ ಮತ್ತೊಮ್ಮೆ ‘ಮುಕ್ಕಾಲಾ ಮುಕಾಬುಲಾ’ ಹಾಡನ್ನು ರಿಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ಹೌದು 1994ರಲ್ಲಿ ಕಾದಲನ್ ತಮಿಳು ಸಿನಿಮಾದಲ್ಲಿದ್ದ ಈ ಹಾಡನ್ನು ನಂತರ ಹಿಂದಿಯ ‘ಹಮ್ಸೇ ಹೈ ಮುಕಾಬುಲಾ’ ಚಿತ್ರದಲ್ಲಿಯೂ ಬಳಸಿಕೊಳ್ಳಲಾಗಿತ್ತು. ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದರು.

ಸದ್ಯ ಮತ್ತೊಮ್ಮೆ ಸ್ಟ್ರೀಟ್ ಡಾನ್ಸರ್ ನಲ್ಲಿಯೂ ಈ ಹಾಡನ್ನು ರೀ ಕ್ರಿಯೇಟ್ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ನಿರ್ಮಾಪಕ ಭೂಷಣ್ ಕುಮಾರ್, ಚಿತ್ರದಲ್ಲಿ ಪ್ರಭುದೇವ್ ಅವರು ನೃತ್ಯ ಮಾಡುವ ಸಂದರ್ಭದಲ್ಲಿ ಈ ಹಾಡನ್ನು ಮತ್ತೊಮ್ಮೆ ರಿಕ್ರಿಯೇಟ್ ಮಾಡುವ ಅಗತ್ಯವಿತ್ತು. ಆ ಕಾರಣಕ್ಕಾಗಿ ಮತ್ತೊಮ್ಮೆ ಹಾಡನ್ನು ಬಳಸಿಕೊಳ್ಳಲಾಗಿದ್ದು, ಈ ಹಾಡಿಗೂ ಮೊದಲಿನ ಹಾಡಿನಷ್ಟೇ ಮಹತ್ವ ದೊರೆಯಲಿದೆ ಎಂದಿದ್ದಾರೆ.

 

 

ಇನ್ನಷ್ಟು ಓದಿರಿ

Scroll to Top