ಇತ್ತೀಚಿಗಷ್ಟೇ ರಿಲೀಸ್ ಆಗಿದ್ದ ವೀಕೆಂಡ್ ಸಿನಿಮಾ ಸದ್ದು ಗದ್ದಲವಿಲ್ಲದೇ ಪರಭಾಷೆಗೆ ಹಾರಲು ರೆಡಿಯಾಗುತ್ತಿದೆ. ರೀಸನ್ ಇಲ್ಲದೇ ಕೆಲಸದಿಂದ ತೆಗೆದು ಹಾಕುವ ಐಟಿ ಕಂಪನಿಗಳು, ಆನಂತರ ಕೆಲಸ ಕಳೆದುಕೊಂಡವರ ಪಾಡು, ಪಡಿಪಾಟಲು, ಸಿಟ್ಟು, ಸೆಡವು, ಸ್ಥಿತಿಗತಿಗಳು, ಸೇಡು ಇತ್ಯಾದಿಗಳನ್ನು ವೀಕೆಂಡ್ ನಲ್ಲಿ ಮನರಂಜನಾತ್ಮಕವಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ಟೆಕ್ಕಿಗಳ ವಾರಾಂತ್ಯದ ಕಥೆಯನ್ನು ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯಲ್ಲಿ ಪ್ರೇಕ್ಷಕರ ಮನಮುಟ್ಟುವಂತೆ ಹೇಳಿರುವುದು ವೀಕೆಂಡ್ ಗೆ ಪ್ಲಸ್ ಪಾಯಿಂಟ್ ಆಗಿತ್ತು.

ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಆಕರ್ಷಣೆಯಾಗಿದ್ದು, ನಾಯಕನ ತಾತನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಇನ್ನು ನಾಯಕನಾಗಿ ಮಿಲಿಂದ್ ಮತ್ತು ನಾಯಕಿಯಾಗಿ ಸಂಜನಾ ಬುರ್ಲಿ ಕಾಣಿಸಿಕೊಂಡಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ. ಡಿ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ವಿಶೇಷಪಾತ್ರದಲ್ಲಿ ಅಭಿನಯವನ್ನು ಮಾಡಿರುವುದು ವಿಶೇಷವಾಗಿದೆ. ಸದ್ಯ ವೀಕೆಂಡ್ ಸಿನಿಮಾವನ್ನು ತಮಿಳಿನಲ್ಲೂ ನಿರ್ಮಾಣ ಮಾಡುವ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ. ಅಂದಹಾಗೆ, ತಮಿಳಿನಲ್ಲಿ ನಿರ್ದೇಶಕನಾಗಿ ಶೃಂಗೇರಿ ಸುರೇಶ್ ಮುಂದುವರಿಯಲಿದ್ದು, ಪಾತ್ರವರ್ಗದಲ್ಲಿ ತಮಿಳು ಕಲಾವಿದರನ್ನೇ ಆಯ್ದುಕೊಳ್ಳಲಿದ್ದಾರೆ. ಅಲ್ಲಿನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡು ಟಾಲಿವುಡ್ ನಲ್ಲಿ ವೀಕೆಂಡ್ ಮಜಾ ಮರುಕಳಿಸಲಿದೆ.











































