ಸೂಪರ್ 30 ಟ್ರೇಲರ್ ರಿಲೀಸ್ ಇಂದು!

Picture of Cinibuzz

Cinibuzz

Bureau Report

ಕ್ರಿಶ್ ಖ್ಯಾತಿಯ ಹೃತಿಕ್ ರೋಶನ್ ಅಭಿನಯದ ಸೂಪರ್ 30 ಸಿನಿಮಾದ ಫೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನಲ್ಲಿ ಹೃತಿಕ್ ಲವರ್ ಬಾಯ್ ಲುಕ್ ನಲ್ಲಿ ಸಕ್ಕತ್ತಾಗಿ ಮಿಂಚುತ್ತಿದ್ದು, ಚಿತ್ರದ ಮೇಲಿದ್ದ ನಿರೀಕ್ಷೆ ಮತ್ತಷ್ಟು ಏರಿಕೆಯಾಗಿದೆ.ಸ್ವತಃ ಹೃತಿಕ್ ರೋಶನ್ ಚಿತ್ರದ ಪೋಸ್ಟರ್ ಹಾಗೂ ಟ್ರೇಲರ್ ನನ್ನು ಸಹ ಇಂದು ಬಿಡುಗಡೆ ಮಾಡಲಿದ್ದಾರೆ. ಸದ್ಯ ಪ್ರಪಂಚದಾದ್ಯಂತ ಫ್ಯಾನ್ ಫಾಲೊಯಿಂಗ್ ಇರುವ ಹೃತಿಕ್ ಅಭಿಮಾನಿಗಳು ಟ್ರೇಲರ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಚಿತ್ರದಲ್ಲಿ ಹೃತಿಕ್ ರೋಷನ್ ಗಣಿತದ ಲೆಕ್ಚರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೃತಿಕ್ ಗೆ ನಾಯಕಿಯಾಗಿ ಮೃನಾಲ್ ಠಾಕೂರ್ ನಟಿಸಿದ್ದಾರೆ. ಸೂಪರ್ 30ಯನ್ನು ಫ್ಯಾಂಟಂ ಫಿಲಂ, ಎನ್ ಜಿ ಇ ಮೂವೀಸ್ ಮತ್ತು ರಿಲಯನ್ಸ್ ಎಂಟರ್ ಟೈನ್ ಮೆಂಟ್ ನಿರ್ಮಿಸಿದೆ. ವಿಕಾಸ್ ಬಹಲ್ ಮತ್ತು ಅನುರಾಗ್ ಕಶ್ಯಪ್ ನಿರ್ದೇಶನ ಈ ಚಿತ್ರಕ್ಕಿದೆ. ಸೂಪರ್ 30 ಜುಲೈ 12ರಂದು ಪ್ರಪಂಚದಾದ್ಯಂತ ತೆರೆಕಾಣಲಿದೆ.

ಇನ್ನಷ್ಟು ಓದಿರಿ

Scroll to Top