ಪೊಲೀಸ್ ಕಾಪ್ ಆಗಲಿದ್ದಾರೆ ಡಿಪ್ಪಿ!

Picture of Cinibuzz

Cinibuzz

Bureau Report

ಪೊಲೀಸ್ ಜಾನರ್ ನ ಸಿನಿಮಾಗಳಿಂದಲೇ ಫೇಮಸ್ ಆಗಿರುವ ರೋಹಿತ್ ಶೆಟ್ಟಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ವಿಶೇಷವೆಂದರೆ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪೊಲೀಸ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸ್‌ ಅಧಿಕಾರಿಯ ಕಥೆಯಿರುವ ಸಿನಿಮಾ ನಿರ್ಮಿಸುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರದಲ್ಲಿ ಮೂರು ಪ್ರಮುಖ ಪೊಲೀಸ್ ಪಾತ್ರಧಾರಿಗಳ ಸುತ್ತವನ್ನು ಕಥೆ ಹೆಣೆಯಲಾಗಿದ್ದು, ಸಿಂಗಂನ ಅಜಯ್‌ ದೇವಗನ್‌, ಸಿಂಬಾದ ರಣವೀರ್‌ ಸಿಂಗ್‌ ಮತ್ತು ಸೂರ್ಯವಂಶಿಯ ಅಕ್ಷ ಯ್‌ ಕುಮಾರ್‌ ಈ ಸಿನಿಮಾದಲ್ಲಿ ಜನರನ್ನು ರಂಜಿಸಲಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆಯವರ ಸ್ಟಂಟ್‌ಗಳನ್ನು ನೋಡಲು ಕೂಡಾ ಅಭಿಮಾನಿಗಳು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಇನ್ನಷ್ಟು ಓದಿರಿ

Scroll to Top