ಸಹಾಯಕ ನಿರ್ದೇಶಕಿಯಾದ ನಟಸಾರ್ವಭೌಮ ಚೆಲುವೆ!

Picture of Cinibuzz

Cinibuzz

Bureau Report

ಯುವರತ್ನ  ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ ಸಿನಿಮಾದಲ್ಲಿ ಹಿರೋಯಿನ್ ಆಗಿ ಸ್ಟೆಪ್ಪು ಹಾಕಿದ್ದ ಮಲಯಾಳಿ ಕುವರಿ ಅನುಪಮಾ ಪರಮೇಶ್ವರನ್. ಸದ್ಯ ನಟನೆಯ ಜತೆ ಜತೆಗೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿದ್ದಾರಂತೆ.

ಹೌದು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಿರುವ ಅನುಪಮಾ ಅವರೆ ನಟಿಸುತ್ತಿರುವ ಹೊಸ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ದುಡಿಯುತ್ತಿದ್ದಾರೆ. ಈ ಚಿತ್ರವನ್ನು ಯುವ ನಿರ್ದೇಶಕ ಶಂಸು ನಿರ್ದೇಶನ ಮಾಡುತ್ತಿದ್ದು, ಮಾಲಿವುಡ್ ಖ್ಯಾತ ನಟ ದುಲ್ಕರ್ ಸಲ್ಮಾನ್ ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಉಳಿದಂತೆ ಚಿತ್ರದ ಟೈಟಲ್, ಹಾಗೂ ನಾಯಕ ಇನ್ನೂ ಫೈನಲ್ ಆಗಿಲ್ಲ.

ಇನ್ನಷ್ಟು ಓದಿರಿ

Scroll to Top