ಸಾರ್ವಕಾಲಿಕ ದಾಖಲೆ ಬರೆದ ರೌಡಿ ಬೇಬಿ ಸಾಂಗು!

Picture of Cinibuzz

Cinibuzz

Bureau Report

ಸಾಮಾನ್ಯವಾಗಿ ಕೆಲ ಚಿತ್ರಗಳ ಹಾಡುಗಳು ಯೂಟ್ಯೂಬ್ ನಲ್ಲಿ ಸಿನಿಮಾ ರಿಲೀಸ್ ಆಗುವವರೆಗೂ ಟ್ರೆಂಡಿಂಗ್ ನಲ್ಲಿರುತ್ತದೆ. ಕೆಲವೊಮ್ಮೆ ಸಿನಿಮಾ ರಿಲೀಸ್ ಆಗಿ ಕೆಲ ದಿನಗಳ ವರೆಗೂ ಸಾಂಗು ಗುನುಗುವಂತೆಯೂ ಮಾಡುತ್ತದೆ. ಆದರೆ ಕಳೆದ ಡಿಸೆಂಬರ್ ನಲ್ಲಿ ರಿಲೀಸ್ ಆಗಿದ್ದ ಮಾರಿ 2 ಚಿತ್ರದ ರೌಡಿ ಬೇಬಿ ಸಾಂಗ್ ಈಗಲೂ ಯೂಟ್ಯೂಬ್ ನಲ್ಲಿ  500 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

ಈ ಮೂಲಕ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡುಗಳ ಪೈಕಿ ಮೊದಲ ಸ್ಥಾನವನ್ನುಳಿಸಿಕೊಂಡಿದೆ.  ಈ ಹಾಡಿಗೆ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ ಈ ಹಾಡನ್ನು ಧನುಷ್ ಅವರೇ ಬರೆದು ಹಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top