ರಜನಿಯ 2.0 ಚೀನಾದಲ್ಲಿ ಬಿಡುಗಡೆ!

Picture of Cinibuzz

Cinibuzz

Bureau Report

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ಯಶಸ್ಸಿನ ಶಿಖರವನ್ನೇನು ಮುಟ್ಟಲಿಲ್ಲ. ಆದರೂ ಗಳಿಕೆಯಲ್ಲಿ ಹಿಂದೆ ಬೀಳದ ಈ ಸಿನಿಮಾ 543 ಕೋಟಿ ಹಾಕಿದ ಬಂಡವಾಳಕ್ಕಿಂತ 800 ಕೋಟಿ ಕಲೆಕ್ಷನ್ ಮಾಡಿ ದಾಖಲೆಯನ್ನೂ ಬರೆದಿತ್ತು. ಪ್ರಪಂಚದಾದ್ಯಂತ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಿತ್ತು.

ಇದೀಗ, 2.0 ಸಿನಿಮಾ ಜುಲೈ 12 ರಂದು ಚೀನಾದಲ್ಲಿ ತೆರೆಕಾಣುತ್ತಿದ್ದು, ಸುಮಾರು 55 ಸಾವಿರ ಸ್ಕ್ರೀನ್ ನಲ್ಲಿ ಪ್ರದರ್ಶನವಾಗಲಿದೆಯಂತೆ. ಚೀನಾದಲ್ಲಿ ಅಮೀರ್ ಖಾನ್ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇದ್ದು, ಒಳ್ಳೆಯ ಬಿಸಿನೆಸ್ ಕೂಡ ಮಾಡಿದೆ. ಆದರೆ ಬಾಹುಬಲಿ ಚಿತ್ರದ ಎರಡು ಭಾಗವೂ ಚೀನಾದಲ್ಲಿ ನಿರೀಕ್ಷಿತ ಆದಾಯ ಗಳಿಸಿಲ್ಲ. ಇನ್ನುಳಿದಂತೆ ಶಂಕರ್ ನಿರ್ದೇಶನ ಮಾಡಿದ್ದ 2.0 ಚಿತ್ರವನ್ನ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿತ್ತು. 2010ರಲ್ಲಿ ರಿಲೀಸ್ ಆಗಿದ್ದ ಎಂಥಿರನ್ ಸಿನಿಮಾದ ಮುಂದುವರಿದ ಭಾಗ ಇದಾಗಿದ್ದು, ರಜನಿಕಾಂತ್, ಅಕ್ಷಯ್ ಕುಮಾರ್ ಜೊತೆ ಆಮಿ ಜಾಕ್ಸನ್ ನಟಿಸಿದ್ದರು.

ಇನ್ನಷ್ಟು ಓದಿರಿ

Scroll to Top