ಹೆಬ್ಬುಲಿ ಕೃಷ್ಣ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ನಟನೆಯ ಸಿನಿಮಾ ಪೈಲ್ವಾನ್. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರೀ ಕುತೂಹಲವನ್ನು ಉಂಟು ಮಾಡಿರುವ ಚಿತ್ರ ಇದಾಗಿದೆ. ಆಗಸ್ಟ್ 8ರಂದು ಈ ಚಿತ್ರದ ಬಿಡುಗಡೆಗೆ ದಿನಾಂಕವೂ ಫಿಕ್ಸ್ ಆಗಿದ್ದು, ಎಂಟು ಭಾಷೆಗಳಲ್ಲಿ ತೆರೆ ಕಾಣಲಿದೆ.
https://twitter.com/krisshdop/status/1135529905012191235
ಅಂದಹಾಗೆ ಪೈಲ್ವಾನ್ ಚಿತ್ರದ ಮೊಟ್ಟ ಮೊದಲ ಬಾಕ್ಸಿಂಗ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ ಈ ಕುರಿತು ಮೊದಲೇ ನಿರ್ದೇಶಕ ಕೃಷ್ಣ ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದರು. ನಟರಾದ ಚಿರಂಜೀವಿ, ಮೋಹನ್ ಲಾಲ್, ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್ ಸಮ್ಮುಖದಲ್ಲಿ ಇಂದು ಸಂಜೆ 4 ಗಂಟೆಗೆ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.











































