ಕತ್ರಿನಾಗೆ ಜಾನ್ವಿ ಚಡ್ಡಿ ಮೇಲೆ ಕಣ್ಣು!

Picture of Cinibuzz

Cinibuzz

Bureau Report

ಕತ್ರಿನಾ ಕೈಫ್ ಗೆ ಜಾನ್ವಿ ಕಪೂರ್ ಚಡ್ಡಿ ಮೇಲೆ ಕಣ್ಣಂತೆ. ಹೌದು ಕತ್ರಿನಾ ಹೋಗುವ ಜಿಮ್ ಗೆ ಜಾನ್ವಿ ಕೂಡ ವರ್ಕ್ ಔಟ್ ಮಾಡಲು ಹೋಗುತ್ತಾಳೆ. ಆಗ ಜಾನ್ವಿ ಧರಿಸಿದ ಸಣ್ಣ ಚಟ್ಟಿ ನೋಡಿ ಕತ್ರಿನಾ ಹೌಹಾರಿದ್ದರಂತೆ. ಈ ಬಗ್ಗೆ ಕತ್ರಿನಾ, ನೇಹಾ ಧೂಪಿಯಾಳ ಚಾಟ್ ಷೋ ಬಿಎಫ್ಎಫ್ ವೋಗ್ ನಲ್ಲಿ ಹೇಳಿಕೊಂಡಿದ್ದಾರೆ. ನಿಜಕ್ಕೂ ಜಾನ್ವಿ ಧರಿಸುವ ಶಾರ್ಟ್ ತುಂಬಾ ಚಿಕ್ಕದಿರುತ್ತದೆ. ಎಂದು ಕೀಟಲೆ ಮಾಡಿದ್ದಾರೆ.

ಜಿಮ್ ವರ್ಕ್ ಔಟ್ ಲುಕ್ ಗಳಲ್ಲಿ ಯಾವ ಸೆಲೆಬ್ರೆಟಿ ಮುಂಚೂಣಿಯಲ್ಲಿದ್ದಾರೆ ಎನ್ನುವ ನೇಹಾಳ ಪ್ರಶ್ನೆಗೆ ಕತ್ರಿನಾ, ನನಗೆ ಜಾನ್ವಿ ಧರಿಸುವ ಶಾರ್ಟ್ಸ್ ಬಗ್ಗೆಯೇ ಚಿಂತೆ. ನಾವಿಬ್ಬರೂ ಒಂದೇ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತೀವಿ. ಅವಳು ಅಷ್ಟು ಚಿಕ್ಕ ಚಡ್ಡಿ ಬೇರೆ ಧರಿಸಿ ಬರುತ್ತಾಳೆ. ಹೊರಗಡೆ ನೋಡಿದರೆ ಇವಳ ಪೋಟೋಗಳನ್ನು ನಿರಂತರವಾಗಿ ತೆರೆಯುತ್ತಿರುತ್ತಾರೆ. ಎಂದು ಕತ್ರಿನಾ ಜಾನ್ವಿ ಚಡ್ಡಿಯ ಕುರಿತಾದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

 

ಇನ್ನಷ್ಟು ಓದಿರಿ

Scroll to Top