ಸ್ಯಾಂಡಲ್ ವುಡ್ ಗೆ ಧನ್ಯಾ ರಾಮ್ ಕುಮಾರ್ ಎಂಟ್ರಿ!

Picture of Cinibuzz

Cinibuzz

Bureau Report

ಮದುವೆಯ ಮಮತೆಯ ಕರೆಯೋಲೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನಟ ಸೂರಜ್ ಗೌಡ. ಕಹಿ ಮತ್ತು ಸಿಲಿಕಾನ್ ಸಿಟಿ ಚಿತ್ರಗಳಲ್ಲಿ ಭಿನ್ನವಾದ ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು. ತೆಲುಗಿನಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದರೂ ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ಸೂರಜ್ ರಿಜೆಕ್ಟ್ ಮಾಡಿದ್ದರು.  ಸಿನಿಮಾ ಆಯ್ಕೆಯಲ್ಲಿಯೂ ಕೊಂಚ ಜಾಗರೂಕತೆ ವಹಿಸಿರುವ ಸೂರಜ್ ಅಳೆದು ತೂಗಿ ಸಿನಿಮಾ ಒಪ್ಪುವ ನಿರ್ಧಾರ ಮಾಡಿದ್ದಾರೆ. ಅಂದಹಾಗೆ ಸೂರಜ್ ಸದ್ಯ ಕನ್ನಡದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲವ್ ಸ್ಟೋರಿ ಆಧರಿತವಾದ ಸಿನಿಮಾ ಇದಾಗಿದ್ದು, ಸೂರಜ್ ಅವರೇ ಕಥೆಯನ್ನು ಹೊಸೆದಿದ್ದಾರೆ. ಸದ್ಯ ಈ ಚಿತ್ರಕ್ಕೆ ವರ ನಟ ಡಾ. ರಾಜ್ ಕುಮಾರ್ ಅವರ ಮೊಮ್ಮಗಳಾದ ಧನ್ಯಾ ರಾಮ್ ಕುಮಾರ್ ನಾಯಕಿ. ಧನ್ಯ ಅವರು ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿಯ ಪುತ್ರಿ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆಯುತ್ತಿದ್ದಾರೆ.

ಸಿಲಿಕಾನ್ ಸಿಟಿ ಚಿತ್ರದ ಕೋ ಡೈರೆಕ್ಟರ್ ಆಗಿದ್ದ ಸುಮನ್ ಜಾದುಗಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ಕಮಲ್ ಹಾಸನ್ ಅವರ ಉತ್ತಮ್ ವಿಲನ್ ಚಿತ್ರಕ್ಕೂ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಘು ದೀಕ್ಷಿತ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಟೈಟಲ್ ಇನ್ನು ಫೈನಲ್ ಆಗಿಲ್ಲ. ವೈಟ್ ಅಂಡ್ ಗ್ರೇ ಮೀಡಿಯಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಜುಲೈನಿಂದ ಶೂಟಿಂಗ್ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಇನ್ನಷ್ಟು ಓದಿರಿ

Scroll to Top