ಯಾನ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್!

Picture of Cinibuzz

Cinibuzz

Bureau Report

ವಿಜಯಲಕ್ಷ್ಮೀ ಸಿಂಗ್ ತಮ್ಮದೇ ಬ್ಯಾನರ್ ನಲ್ಲಿ ಯಾನ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಯಾನ ಮೂಲಕ ತಮ್ಮ ಮೂವರು ಪುತ್ರಿಯರಾದ ವೈಭವಿ, ವೈಸಿರಿ, ವೈನಿಧಿಯನ್ನು ಸ್ಯಾಂಡಲ್ ವುಡ್ ಗೆ ಲಾಂಚ್ ಮಾಡುತ್ತಿದ್ದಾರೆ.

ಯಾನ ಚಿತ್ರೀಕರಣ ಮುಗಿಸಿ ಈಗಾಗಲೇ ರಿಲೀಸ್ ಗೆ ರೆಡಿಯಾಗಿದೆ. ಇತ್ತೀಚಿಗೆ ಸೆನ್ಸಾರ್ ಗೆ ತೆರಳಿದ್ದ ಯಾನ ಯಾವುದೇ ಕಟ್ಟು, ಮ್ಯೂಟಿಲ್ಲದೇ ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.  ಈ ವಿಷಯವನ್ನು ಚಿತ್ರತಂಡ ಫೇಸ್ ಬುಕ್ ನಲ್ಲಿ ಸಂತಸದಿಂದ ಶೇರ್ ಮಾಡಿಕೊಂಡಿದೆ. ಟೀನೇಜ್ ಹುಡುಗಿಯರ ಬದುಕನ್ನು ಬಿಂಬಿಸುವ ಚಿತ್ರ ಇದಾಗಿದೆ.

ಇನ್ನಷ್ಟು ಓದಿರಿ

Scroll to Top