“ಕುಷ್ಕ” ಚಿತ್ರದ “ಸಿಂಪಲ್ ಸಲುಗೆ” ಹಾಡಿನ ಲಿರಿಕಲ್ ವೀಡಿಯೊ ರಿಲೀಸ್ ಆಗಿದೆ. ಅಭಿಲಾಷ್ ಗುಪ್ತರವರ ಸಂಗೀತ ನಿರ್ದೇಶನದಲ್ಲಿ ಹಾಗೂ ವಿಜಯ್ ಪ್ರಕಾಶ್ ಮತ್ತು ಸಾನ್ವಿ ಶೆಟ್ಟಿಯವರ ದನಿಯಲ್ಲಿ ಈ ಹಾಡು ಮೂಡಿಬಂದಿದೆ.
ಈ ಹಿಂದೆ “ಹೀಗೊಂದು ದಿನ” ಚಿತ್ರವನ್ನು ನಿರ್ದೇಶಿಸಿದ್ದ ವಿಕ್ರಮ್ ಯೋಗಾನಂದ ಅವರು ಈಗ “ಕುಷ್ಕ” ಚಿತ್ರಕ್ಕೆ ಆ್ಯಕ್ಸನ್ ಕಟ್ ಹೇಳಿದ್ದಾರೆ. ಕುಷ್ಕ ಚಿತ್ರದಲ್ಲಿ ಲಕ್ಷ್ಮಿ ಬಾರಮ್ಮ ದಾರಾವಾಹಿಯ ಚಂದನ್ ಗೌಡ ಮತ್ತು ಕೆಮಿಸ್ಟ್ರಿ ಕರಿಯಪ್ಪ ಚಿತ್ರದಲ್ಲಿ ನಟಿಸಿದ ಸಂಜನಾ ಆನಂದ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.











































