ಸದ್ಯದಲ್ಲೇ ಒಂಟಿ ಟ್ರೇಲರ್ ಬಿಡುಗಡೆ!

Picture of Cinibuzz

Cinibuzz

Bureau Report

ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ನಟಿಸಿ ನಿರ್ಮಿಸುತ್ತಿರುವ ಸಿನಿಮಾ ಒಂಟಿ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಮುಂದಿನ ತಿಂಗಳು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಜೂನ್ 11ರಂದು ಒಂಟಿ ಟ್ರೇಲರ್ ಬಿಡುಗಡೆಯಾಗಲಿದೆ.

ಈ ಹಿಂದೆ ಪ್ರಶಾಂತ್ ನಟನೆಯ ಒರಟ ಐ ಲವ್ ಯು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಶ್ರೀ ಒಂಟಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಂಜೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಆರ್ಯ ಒಂಟಿ ಮೂಲಕ ನಿರ್ಮಾಪಕ ಕಮ್ ಹಿರೋ ಆಗಿ ಮಿಂಚಲು ರೆಡಿಯಾಗಿದ್ದಾರೆ. ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಆರ್ಯನಿಗೆ ನಾಯಕನಾಗಿ ಇದು ಎರಡನೇ ಸಿನಿಮಾ. ಇನ್ನು ಆರ್ಯನಿಗೆ ನಾಯಕಿಯಾಗಿ ಮೇಘನಾ ರಾಜ್ ಜತೆಯಾಗಿದ್ದು, ಉಳಿದಂತೆ ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಮಜಾ ಟಾಕೀಸ್ ಪವನ್ ಇತರರು ತಾರಾಬಳಗದಲ್ಲಿದ್ದಾರೆ.

ಇನ್ನಷ್ಟು ಓದಿರಿ

Scroll to Top