ಬೆಲ್ಲಂಕೊಂಡ ಶ್ರೀನಿವಾಸ್ ಅಭಿನಯಿಸಿರುವ ಥ್ರಿಲ್ಲರ್ ಮೂವಿ ರಾಕ್ಷಸುಡು. ಈಗಾಗಲೇ ಪೋಸ್ಟರ್ ಮೂಲಕವೇ ಸದ್ದು ಮಾಡಿರುವ ಈ ಚಿತ್ರ ಟೀಸರೊಂದನ್ನು ರಿಲೀಸ್ ಮಾಡಿದೆ. ಕೌಟುಂಬಿಕ, ಸಸ್ಪೆನ್ಸ್ ಕಥಾಹಂದರವನ್ನು ಹೊಂದಿರುವ ರಾಕ್ಷಸಂನಲ್ಲಿ ಬೆಲ್ಲಂ ಕೊಂಡ ಶ್ರೀನಿವಾಸ್ ಪೊಲೀಸ್ ಅಧಿಕಾರಿಯಾಗಿ ಸಕ್ಕತ್ತಾಗಿ ಮಿಂಚಿದ್ದಾರೆ. ಇನ್ನು ಶ್ರೀನಿವಾಸ್ ಗೆ ನಾಯಕಿಯಾಗಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ.
ರಿಲೀಸ್ ಆಗಿರುವ ಟೀಸರ್ ಸಹ ಭಯಾನಕವಾಗಿದ್ದು, ನೋಡುಗರ ಮೈ ಜುಂ ಎನ್ನಿಸುವುದರಲ್ಲಿ ಎರಡು ಮಾತಿಲ್ಲ. ಅಷ್ಟರಮಟ್ಟಿಗೆ ರಾಕ್ಷಸುಡು ಕೌತುಕತೆಯನ್ನು ಕೊನೆಯವರೆಗೂ ಉಳಿಸಿಕೊಂಡಿದೆ. ಟೀಸರ್ ನೋಡಿದ ಅಭಿಮಾನಿಗಳು ಸಿನಿಮಾಕ್ಕಾಗಿ ಹಾತೊರೆಯುವಂತೆಯೂ ಮಾಡಿದೆ. ತಮಿಳಿನಲ್ಲಿ ರಿಲೀಸ್ ಆಗಿದ್ದ ರಾತಚಸನ್ ಸಿನಿಮಾದ ರಿಮೇಕ್ ಸಿನಿಮಾ ಇದಾಗಿದ್ದು, ತಮಿಳಿನಲ್ಲಿ ವಿಷ್ಣು ವಿಶಾಲ್ ಮತ್ತು ಅಮಲಾ ಪೌಲ್ ಪಾತ್ರವನ್ನು ಅನುಪಮಾ ಪರಮೇಶ್ವರನ್ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.











































