ಬ್ಯುಸಿ ಷೆಡ್ಯೂಲ್ ನಲ್ಲೂ ಸಿನಿಮಾ ಮಾಡಲಿದ್ದಾರೆ ರಿಷಬ್ ಶೆಟ್ಟಿ!

Picture of Cinibuzz

Cinibuzz

Bureau Report

ಬೆಲ್ ಬಾಟಮ್ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಆ ಸಿನಿಮಾದ ಮೂಲಕ ಚೊಚ್ಚಲ ಬಾರಿಗೆ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದಿದ್ದರು. ಪ್ರಥಮ ಪ್ರಯತ್ನದಲ್ಲಿಯೇ ಸಕ್ಸಸ್ ಕಂಡಿರುವ ಶೆಟ್ಟಿ ಮುಂದೆ ನಿರ್ದೆಶನ ಮಾಡುತ್ತಾರಾ! ಇಲ್ವಾ? ಎಂಬ ಗೊಂದಲ ಗಾಂಧಿನಗರದಲ್ಲಿ ಶುರುವಾಗಿತ್ತು. ಅದು ನಿಜವೆಂಬಂತೆ ರಿಷಬ್ ಶೆಟ್ಟಿ ಅಭಿನಯದ ನಾಥೂರಾಮ್ ಸಿನಿಮಾ ಕೂಡ ಸೆಟ್ಟೇರಿದ್ದು, ಹೊಸದಾಗಿ ಆಂಟಿಗೋನಿ ಶೆಟ್ಟಿ ಕೂಡಾ ಅನೌನ್ಸ್ ಆಗಿದೆ.

ಈ ಮಧ್ಯೆ ರಿಷಬ್ ಶೆಟ್ಟಿ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುವುದಾಗಿಯೂ ತಿಳಿಸಿದ್ದಾರೆ. ಇದೇ ವರ್ಷದಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ ರಿಷಬ್. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಫ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಅಧಿಕೃತ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

ಇನ್ನಷ್ಟು ಓದಿರಿ

Scroll to Top