ರಂಜಾನ್ ಹಬ್ಬಕ್ಕೆ ರಿಲೀಸ್ ಆಯ್ತು ರಾಬರ್ಟ್ ಥೀಮ್ ಪೋಸ್ಟರ್!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಚಿತ್ರದ ಪೋಸ್ಟರ್ ಇಂದು ರಿಲೀಸ್ ಆಗಲಿದೆ. ಕೆಲ ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿಕೊಂಡಿದ್ದ ರಾಬರ್ಟ್ ಚಿತ್ರತಂಡ ಸದ್ದಿಲ್ಲದೇ ಶೂಟಿಂಗ್ ಕೂಡ ಪ್ರಾರಂಭಿಸಿತ್ತು. ರಂಜಾನ್ ಹಬ್ಬದ ಪ್ರಯುಕ್ತ ರಾಬರ್ಟ್ ಸಿನಿಮಾದ ಥೀಮ್ ಪೋಸ್ಟರ್ ನ್ನು ದರ್ಶನ್ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ರಿಲೀಸ್ ಮಾಡಿದ್ದಾರೆ.

ಪೋಸ್ಟರ್ ನಲ್ಲಿ ಕಪ್ಪು ಬಣ್ಣದ ಜಾಕೇಟ್ ಧರಿಸಿ ಬೆನ್ನು ತೋರಿಸಿ ಕುಳಿತಿದ್ದು, ಜಾಕೇಟ್ ಮೇಲೆ ಆನೆಯ ಚಿತ್ರಣವಿದೆ. ಬೈಕಿನ ನಂಬರ್ ಪ್ಲೇಟಿನ ಮೇಲೆ ಡಿ ಬಾಸ್ ಎಂದು ಸಹ ಬರೆಯಲಾಗಿದೆ. ಪೋಸ್ಟರ್ ರಿಲೀಸ್ ಮಾಡಿರುವ ದರ್ಶನ್ “ನೀವೆಲ್ಲರೂ ಕಾತುರದಿಂದ ಕಾಯುತ್ತಿರುವರಾಬರ್ಟ್ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ.

 

ಇನ್ನಷ್ಟು ಓದಿರಿ

Scroll to Top