ಮಾಲ್ಗುಡಿ ಡೇಸ್ ಗಾಗಿ ತೆಳ್ಳಗಾಗುತ್ತಿದ್ದಾರೆ ಚಿನ್ನಾರಿಮುತ್ತಾ!

Picture of Cinibuzz

Cinibuzz

Bureau Report

ಕಿಸ್ಮತ್ ಎಂಬ ವಿಭಿನ್ನ ಪ್ರಯತ್ನದ ಸಿನಿಮಾ ನಂತರ ವಿಜಯ್ ರಾಘವೇಂದ್ರ ಮಾಲ್ಗುಡಿ ಡೇಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿನ ವಿಶೇಷ ಪಾತ್ರವೊಂದಕ್ಕೆ ಬರೋಬ್ಬರಿ 22 ಕೆಜಿ ತೂಕವನ್ನು ಇಳಿಸಲು ಮುಂದಾಗಿರುವ ಚಿನ್ನಾರಿ ಮುತ್ತ ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಿದ್ದಾರೆ. ಈಗಾಗಲೇ 8 ಕೆಜಿ ತೂಕವನ್ನು ಇಳಿಸಿದ್ದು, ಬರುವ ತಿಂಗಳೊಳಗಾಗಿ ಟಾರ್ಗೆಟ್ ಕಂಪ್ಲೀಟ್ ಮಾಡಬೇಕೆಂದು ಡಿಸೈಡ್ ಮಾಡಿದ್ದಾರೆ. ಇನ್ನು ಮಾಲ್ಗುಡಿ ಡೇಸ್ ನ ಕುರಿತು ಮಾತನಾಡಿದ ಚಿನ್ನಾರಿ ಮುತ್ತಾ ನನ್ನ ಸಿನಿ ಬದುಕಿನಲ್ಲಿ ಒಂದು ವಿಶೇಷ ಪ್ರಯತ್ನ. ಇಷ್ಟು ವರ್ಷ ನಾನು ನಿರರವಹಿಸಿರುವ ಪಾತ್ರಗಳಲ್ಲಿ ಬಹಳ ಅಪರೂಪದ ಪಾತ್ರವಿದು. ಈ ಸಿನಿಮಾ ಗೆಲ್ಲುವುದೆಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.

ಇನ್ನು ನಿರ್ದೇಶಕ ಕಿಶೋರ್‌ ಮೂಡಬಿದ್ರೆಯವರನ್ನು ಚಿತ್ರದ ಬಗ್ಗೆ ಕೇಳಿದರೆ “ಇದು ನನ್ನ ನಿರ್ದೇಶನದ ಮೊದಲ ಕನ್ನಡ ಸಿನಿಮಾ ಆಗಿರುವುದರಿಂದ ಎಚ್ಚರಿಕೆಯಿಂದ ಹಾಗು ಪ್ರೀತಿಯಿಂದ ಚಿತ್ರದ ತಯಾರಿಯಲ್ಲಿದ್ದೇವೆ. ವಿಜಯ ರಾಘವೇಂದ್ರರವರ ಸಿನಿಬದುಕಿನಲ್ಲಿ ಇಂತದ್ದೊಂದು ಪಾತ್ರ ಮಾಡಿಲ್ಲ. ನಿರ್ದೇಶಕನಾಗಿಯೂ ಕೂಡ ವಿಜಯರಾಘವೇಂದ್ರರವರ ಪಾತ್ರ ನನಗೆ ಭಿನ್ನವಾಗಿದೆ ಎಂದೆನಿಸುತ್ತದೆ. ಹಾಗೆಯೇ, ಪ್ರತಿಯೊಬ್ಬ ಮನುಷ್ಯನ ಬಳಿಯೂ ನೆನಪುಗಳದ್ದೊಂದು ಗುಚ್ಚವಿರುತ್ತದೆ. ಆ ನೆನಪುಗಳ ಸುತ್ತ ನಮ್ಮ ಈ “ಮಾಲ್ಗಡಿ ಡೇಸ್” ಕತೆಯೂ ಕೂಡ ಸಾಗುತ್ತದೆ” ಎಂದು ತಿಳಿಸುತ್ತಾರೆ.

ಈಗಾಗಲೇ ತೀರ್ಥಹಳ್ಳಿ, ಆಗುಂಬೆ,ಕಳಸ, ಪಾಂಡಿಚರಿ ಸುತ್ತಮುತ್ತ ಚಿತ್ರೀಕರಣ ನೆಡೆಸಿರುವ ಚಿತ್ರತಂಡ ಬೆಂಗಳೂರಿನಲ್ಲಿ ಇತ್ತೀಚಿಗಷ್ಟೆ ಮೊದಲ ಹಂತದ ಚಿತ್ರೀಕರಣವನ್ನು ಸಂಪೂರ್ಣ ಮುಗಿಸಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಪೂರ್ವ ತಯಾರಿ ನಡೆಸಿದೆ. ʻಮಾಲ್ಗುಡಿ ಡೇಸ್‌ʼಚಿತ್ರವನ್ನು ತುಳು ನಿರ್ಮಾಪಕರಾದ ಕೆ.ರತ್ನಾಕರ್‌ ಕಾಮತ್‌ರವರು ಸ್ವಯಂಪ್ರಭ ಎಂಟರ್ಟೈನ್ಮೆಂಟ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಬಿಗ್‌ ಬಾಸ್‌ ಖ್ಯಾತಿಯ ಧನರಾಜ್‌, ಗ್ರೀಷ್ಮ ಮತ್ತಿತರ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಹೆಸರಿನಿಂದಲೇ ಕುತೂಹಲ ಹುಟ್ಟಿಸಿರುವ ʻಮಾಲ್ಗುಡಿ ಡೇಸ್‌ʼ ಚಿತ್ರ ಪ್ರೇಕ್ಷಕರ ಕುತೂಹಲ ದಿನದಿನಕ್ಕೂ ಹೆಚ್ಚಿಸುತ್ತಿದೆ ಎನ್ನುವುದಂತೂ ಸುಳ್ಳಲ್ಲ.

ಇನ್ನಷ್ಟು ಓದಿರಿ

Scroll to Top