ಚಂದನವನದ ಚಿಟ್ಟೆಗೆ ಹುಟ್ಟುಹಬ್ಬದ ಸಂಭ್ರಮ!

Picture of Cinibuzz

Cinibuzz

Bureau Report

ದಕ್ಷಿಣ ಭಾರತದ ಹೆಸರಾಂತ ನಟಿ ಮುಂಬೈ ಚೆಲುವೆ ಪಾರುಲ್ ಯಾದವ್ ಗಿಂದು ಹುಟ್ಟುಹಬ್ಬದ ಸಂಭ್ರಮ. ಮುವತ್ತರ ವಸಂತಕ್ಕೆ ಕಾಲಿಟ್ಟಿರುವ ಪಾರುಲ್ ಸರಳವಾಗಿ ಕುಟುಂಬದೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕನ್ನಡ, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲೂ ತನ್ನನ್ನು ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಪಾರುಲ್ ಯಾದವ್ ಕನ್ನಡದಲ್ಲಿ ಬಂದು ಬಳಗ, ಪ್ಯಾರ್ ಗೇ ಆಗ್ಬಿಟೈತೆ, ಬಚ್ಚನ್, ಶಿವಾಜಿನಗರ, ವಾಸ್ತುಪ್ರಕಾರ, ಉಪ್ಪಿ 2, ಜೆಸ್ಸಿ, ಕಿಲ್ಲಿಂಗ್ ವೀರಪ್ಪನ್, ಇತ್ಯಾದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯ ರಮೇಶ್ ಅರವಿಂದ ನಿರ್ದೇಶನದ ಬಟರ್ ಫ್ಲೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಸಿನಿಮಾದ ಸಹ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಬಟರ್ ಫ್ಲೈ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಕುರಿತಾದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಿದೆ.

ಇನ್ನಷ್ಟು ಓದಿರಿ

Scroll to Top