ದೇಹ ದಂಡಿಸಿ ಜಯಶಾಲಿಗಳಾಗಿ: ರಾಕುಲ್ ಪ್ರೀತ್ ಸಿಂಗ್

Picture of Cinibuzz

Cinibuzz

Bureau Report

ರಾಕುಲ್ ಪ್ರೀತ್ ಸಿಂಗ್ ಸದ್ಯ ಕಸರತ್ತಿನ ಮೂಡ್ ನಲ್ಲಿದ್ದಾರೆ. ಸೂಕ್ತ ತರಬೇತುದಾರರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾದ ಕಸರತ್ತನ್ನು ಮಾಡಿದ್ದಕ್ಕಾಗಿಯೇ ಡೇ ಡೇ ಪ್ಯಾರ್ ಡೇ ಸಿನಿಮಾದಲ್ಲಿ ಸಕ್ಸಸ್ ಕಾಣಲು ಸಾಧ್ಯವಾಯಿತು ಎಂದು ಇನ್ ಸ್ಟಾ ಗ್ರಾಮ್ ನಲ್ಲಿ ಫಿಟ್ ನೆಸ್ ಕುರಿತಾಗಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಫಿಟ್ಟಾಗಿರಲು ದೇಹದಂಡನೆಯ ಹೊರತಾಗಿ ಮತ್ತಾವುದೇ ಅಡ್ಡದಾರಿಗಳೇ ಇಲ್ಲ. ಇದ್ದರೂ ಅವುಗಳಿಂದ ಶಾಶ್ವತ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

https://www.instagram.com/p/ByUHfYkh0nS/?utm_source=ig_web_copy_link

ರಾಕುಲ್ ನಟನೆಯ ತಮಿಳಿನ ಎನ್ ಜಿ ಕೆ ಸಿನಿಮಾ ಇತ್ತೀಚಿಗಷ್ಟೇ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಆಶ್ಚರ್ಯವೆಂದರೆ ಈ ಸಿನಿಮಾ ತೆಲುಗಿನಲ್ಲಿ ಫ್ಲಾಪ್ ಆಗಿತ್ತು. ಇನ್ನು ರಾಕುಲ್ ನಟಿಸಿರುವ ಮನ್ಮಥುಡು 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜತೆಯಾಗಿ ರಾಕುಲ್ ನಟಿಸಿದ್ದಾರೆ.  28 ವರ್ಷದ ರಾಕುಲ್ ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟಿಮಣಿಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top