ಬಿಲ್‌ಗೇಟ್ಸ್ ಟೀಸರ್ ಬಿಟ್ಟರು!

Picture of Cinibuzz

Cinibuzz

Bureau Report

ಶ್ರೀನಿವಾಸ್ ಮಂಡ್ಯ ಅವರ ನಿರ್ದೇಶನದ ಶಿಶಿರ ಶಾಸ್ತ್ರಿ ಹಾಗೂ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಚಿತ್ರ ಬಿಲ್‌ಗೇಟ್ಸ್. ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು. ಹಳ್ಳಿಯಲ್ಲಿ ತಲೆಹರಟೆ ಮಾಡಿಕೊಂಡಿದ್ದ ಹುಡುಗರಿಬ್ಬರು ಶಾಲೆಯಲ್ಲಿ ಮೇಷ್ಟ್ರು ಹೇಳಿದ ಮಾತಿನಿಂದ ಪ್ರಭಾವಿತರಾಗಿ ನಾವು ಕೂಡ ಬಿಲ್‌ಗೇಟ್ಸ್ ಥರ ಆಗರ್ಭ ಶ್ರೀಮಂತರಾಗಿ ಬೆಳೆಯಬೇಕು ಎಂದು ಹಳ್ಳಿಯಿಂದ ಬೆಂಗಳೂರು ನಗರಕ್ಕೆ ಬರುತ್ತಾರೆ. ಮುಂದೆ ಅವರು ತಮ್ಮ ಪ್ರಯತ್ನದಲ್ಲಿ ಯಶ ಕಂಡರೇ ಇಲ್ಲವೇ ಅನ್ನೋದೇ ಈ ಚಿತ್ರದ ಕಥೆ.


ಈ ಚಿತ್ರವನ್ನು ಹನ್ನೊಂದು ಜನ ನಿರ್ಮಾಪಕರು ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಇವರೆಲ್ಲ ಐಟಿ-ಬಿಟಿ ಎಂಪ್ಲಾಯೀಸ್ ಅನ್ನೋದು ಇಲ್ಲಿ ವಿಶೇಷ. ಚಿತ್ರತಂಡದ ಶ್ರಮ ಎಫರ್ಟ್ ಕಂಡು ಬಂಡವಾಳ ಹಾಕಿದ್ದಾರೆ. ರಾಕೇಶ್ ಸಿ. ತಿಲಕ ಈ ಚಿತ್ರದ ಛಾಯಾಗ್ರಾಹಕರು.


ನಟ ಚಿಕ್ಕಣ್ಣ ಮಾತನಾಡಿ, ನಾನು ಎರಡೂವರೆ ವರ್ಷಗಳ ಹಿಂದೆ ಅಭಿನಯಿಸಿದ ಸಿನಿಮಾ ಇದು. ಸಿನಿಮಾ ಮೇಲಿನ ಪ್ರೀತಿಯಿಂದ ನಿರ್ಮಾಪಕರು ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ ತುಂಬಾ ಸಲ ರೀಶೂಟ್ ಮಾಡಿದ್ದರಿಂದ ಬಜೆಟ್ ಜಾಸ್ತಿನೇ ಆಗಿದೆ. ಒಳ್ಳೇ ಮೆಸೇಜ್‌ನೊಂದಿಗೆ ಎಂಟರ್‌ಟೈನ್‌ಮೆಂಟ್ ಕೂಡ ಈ ಚಿತ್ರದಲ್ಲಿದೆ ಎಂದು ಹೇಳಿದರು. ಮಿಸ್ಟರ್ ಎಲ್‌ಎಲ್‌ಬಿ ಖ್ಯಾತಿಯ ಶಿಶಿರ ಶಾಸ್ತ್ರಿ ಈ ಚಿತ್ರದಲ್ಲಿ ಹೀರೋ ಪಾತ್ರ ಮಾಡಿದ್ದಾರೆ. ದ್ವಿತೀಯಾರ್ಧದಲ್ಲಿ ಬರುವ ಯಮಲೋಕದ ಭಾಗವನ್ನು ಗ್ರಾಫಿಕ್ಸ್‌ನಲ್ಲಿ ಮಾಡಿದ್ದು ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು.


ಚಿತ್ರದ ನಾಯಕಿ ರಶ್ಮಿತ್ ಮಾತನಾಡಿ, ಈ ಚಿತ್ರದಲ್ಲಿ ಸೆಕೆಂಡ್ ಲೀಡ್‌ರೋಲ್ ಮಾಡಿzನೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಪಲ್ಲವಿಗೌಡ ಸೌಮ್ಯ ಎಂಬ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ನಟ ದೊಡ್ಡಣ್ಣ ಅವರಿಗೆ ಸನ್ಮಾನಿಸಿತು.

ಇನ್ನಷ್ಟು ಓದಿರಿ

Scroll to Top