ಗೋಧೂಳಿ, ತುಳಸಿಯಂಥ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದ ರಾಣಾ ಸುನೀಲ್‌ಕುಮಾರ್ ಸಿಂಗ್ ಚಿತ್ರರಂಗದಲ್ಲಿ ಎರಡನೇ ಹೆಜ್ಜೆ ಇರಿಸಿದ್ದಾರೆ. ಅಂದರೆ ಹಿಂದೆ ಗಣೇಶ್ ಅಭಿನಯದ ಮದುವೆ ಮನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸುನೀಲ್ ಕುಮಾರ್ ಸಿಂಗ್ ಈಗ ಮೀನಾ ಬಜಾರ್ ಎನ್ನುವ ವಿಭಿನ್ನ ಪ್ರಯೋಗದ ಚಿತ್ರ ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಈ ಚಿತ್ರದ ಟೀಸರ್, ಪೋಸ್ಟರ್ಗಳನ್ನು ಆಟೋ ಚಾಲಕರು, ಐಟಿ ಉದ್ಯೋಗಿಗಳ ಕೈಲಿ ಅನಾವರಣಗೊಳಿಸಿ ವಿಶೇಷತೆ ಮೆರೆದಿದ್ದಾರೆ. ಕಳೆದ ವಾರ ರೇಣುಕಾಂಭ ಸ್ಟುಡಿಯೋದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳ ಟೀಸರ್ ಬಿಡುಗಡೆಯಾಯಿತು. ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮ್ಯಾಥ್ಯೂ ರಾಜನ್ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ. ವೈಭವಿ ಜೋಷಿ, ಶ್ರೀಜಿತ ಘೋಷ್, ಸುನೀಲ್‌ಕುಮಾರ್ ಸಿಂಗ್‌ರಾಜೇ? ನಟರಂಗ ಅರವಿಂದರಾವ್, ಭಾಸ್ಕರ್ ಹಾಗೂ ಅಲಿಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೀನಾ ಜಾರ್ ಇದು ಒಬ್ಬ ನಿರ್ದೇಶಕನ ದೃಷ್ಟಿಯಲ್ಲಿ ಮಾಡಿರುವ ಕಥೆ, ಟೈಟಲ್‌ಗೆ ಸ್ಪಷ್ಟನೆ ಕೊಡುವಂಥ ಹಲವಾರು ಸನ್ನಿವೇಶಗಳು ಚಿತ್ರದಲ್ಲಿವೆ. ಚಿತ್ರದ ಶೂಟಿಂಗ್, ಪ್ರೋಸ್ಟ್ ಪ್ರೊಡಕ್ಷನ್ ಕೆಸಲಗಳು ಮುಗಿದಿದ್ದು, ಸೆನ್ಸಾರ್ ಕೂಡ ಆಗಿದೆ. ತೆಲುಗು ಚಿತ್ರಕ್ಕೆ ಯು/ಎ ಸಿಕ್ಕಿದ್ದು ಕನ್ನಡಕ್ಕೆ ಎ ಕೊಟ್ಟಿದ್ದಾರೆ. ಚಿತ್ರದಲ್ಲಿ ೫ ಪ್ರಮುಖ ಪಾತ್ರಗಳಿವೆ. ನಾನು ಒಬ್ಬ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದೇನೆ. ಸಿಂಗ್ ಸಿನಿಮಾ ಮೂಲಕ ನಮ್ಮ ಅಣ್ಣ ನಾಗೇಂದ್ರ ಸಿಂಗ್ ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ನಟ ರಾಜೇಶ್ ನಟರಂಗ ಮಾತನಾಡಿ, ಸುನೀಲ್ ನನಗೆ ಆರಂಭದ ದಿನಗಳಿಂದಲೂ ಸ್ನೇಹಿತ. ಸೀರಿಯಲ್ ನಂತರ ಈಗ ಸಿನಿಮಾ ಕೂಡ ನಿರ್ಮಿಸಿದ್ದಾರೆ. ದಿಲ್‌ದಾರ್ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು.
೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಐಟಂ ಡ್ಯಾನ್ಸರ್ ಆಗಿದ್ದ ಅಲಿಶಾ ಈ ಚಿತ್ರದಲ್ಲಿ ಹಾಡಿನ ಜೊತೆಗೆ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ನಾಯಕಿಯರಾದ ಶ್ರೀಜಿತ ಘೋಷ್ ಹಾಗೂ ವೈಭವಿ ಅವರದು ಚಿತ್ರದಲ್ಲಿ ತುಂಬಾ ವಿಶೇಷ ಪಾತ್ರವಂತೆ. ನಿರ್ದೇಶಕ ಪ್ರೇಕ್ಷಕನಾದರೆ ಮಾತ್ರ ಉತ್ತಮ ಸಿನಿಮಾ ಮಾಡಲು ಸಾಧ್ಯ ಎನ್ನುವುದು ಚಿತ್ರದ ಎಳೆಯಂತೆ.
ಮೀನಾ ಬಜಾರ್., ಟೀಸರ್ ಬಂತು
Cinibuzz
Bureau Report
ಇನ್ನಷ್ಟು ಓದಿರಿ











































