ಹಿಡ್ಕೊ ಹಿಡ್ಕೊ ಹಿಡ್ಕೊ ವಸಿ ತಡ್ಕೊ!

Picture of Cinibuzz

Cinibuzz

Bureau Report

ಈಗ ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್ ಇಬ್ಬರನ್ನೂ ಜೊತೆ ಸೇರಿಸಿ ಕುಣಿಸಿ ಕುಪ್ಪಳಿಸಿದ್ದಾರೆ.  ಈ ಹಾಡಿಗಾಗಿ ವಿಶೇಷ ಸೆಟ್ ಕೂಡಾ ನಿರ್ಮಿಸಿದ್ದು ನಿರ್ಮಾಪಕ ಉದಯ್ ಮೆಹ್ತಾ ಸಖತ್ತಾಗೇ ಖರ್ಚು ಮಾಡಿದ್ದಾರೆ.
ಶತಾಯಗತಾಯ ನವೆಂಬರ್ ೧೫ಕ್ಕೆ ತೆರೆಗೆ ಬರಲು ತೀರ್ಮಾನಿಸಿರುವ ‘ಬ್ರಹ್ಮಚಾರಿಯ ಮೊದಲ ಹಾಡು ಚಿತ್ರೀಕರಣಗೊಳ್ಳುತ್ತಿದೆ. ‘ಹಿಡ್ಕೊ ಹಿಡ್ಕೊ ಹಿಡ್ಕೊ ವಸಿ ತಡ್ಕೊ ತಡ್ಕೊ ಎಂಬ ಸಾಲಿನಿಂದ ಆರಂಭವಾಗುವ   ಮಜಬೂತಾದ ಸಾಂಗನ್ನು ಚಿತ್ರತಂಡ ಅಷ್ಟೇ ಮಜವಾಗಿ ಶೂಟ್ ಮಾಡುತ್ತಿದೆ.
ಇದೇ ಉದಯ್ ಮೆಹ್ತಾ ನಿರ್ಮಾಣದಲ್ಲಿ ನೀನಾಸಂ ಸತೀಶ್ ಅಭಿನಯಿಸಿದ್ದ ಲವ್ ಇನ್ ಮಂಡ್ಯ ಚಿತ್ರದ ಬಪ್ಪಿ ಲಹರಿ ಹಾಡಿದ್ದ ‘ಕರೆಂಟು ಹೋದಾ ಟೈಮಲಿ ಎನ್ನುವ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ‘ಹಿಡ್ಕೊ ಹಿಡ್ಕೊ ಹಾಡು ಕೂಡಾ ಹೆಚ್ಚೂಕಮ್ಮಿ ಅದೇ ಶೈಲಿಯಲ್ಲಿದೆ. ಈ ಹಾಡಿಗೆ ಮುರಳಿ ಕೊರಿಯೋಗ್ರಫಿ ಮಾಡುತ್ತಿದ್ದಾರೆ.
ನೀನಾಸಂ ಸತೀಶ್ ಮತ್ತು ನೃತ್ಯ ನಿರ್ದೇಶಕ ಮುರಳಿ ಇಬ್ಬರದ್ದೂ ಹಿಟ್ ಕಾಂಬಿನೇಶನ್. ಡ್ರಾಮಾ ಚಿತ್ರದ ತುಂಡ್ ಹೈಕ್ಳ ಸಾವಾಸ, ಲೂಸಿಯಾದ ಜಮ್ಮ ಜಮ್ಮ, ಲವ್ ಇನ್ ಮಂಡ್ಯ ಮತ್ತು ಅಯೋಗ್ಯ ಸೇರಿದಂತೆ ಸತೀಶ್ ಅವರ ಬಹುತೇಕ ಹಿಟ್ ಹಾಡುಗಳಿಗೆ ಮುರಳಿ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಈಗ ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್ ಇಬ್ಬರನ್ನೂ ಜೊತೆ ಸೇರಿಸಿ ಕುಣಿಸಿ ಕುಪ್ಪಳಿಸಿದ್ದಾರೆ.  ಈ ಹಾಡಿಗಾಗಿ ವಿಶೇಷ ಸೆಟ್ ಕೂಡಾ ನಿರ್ಮಿಸಿದ್ದು ನಿರ್ಮಾಪಕ ಉದಯ್ ಮೆಹ್ತಾ ಸಖತ್ತಾಗೇ ಖರ್ಚು ಮಾಡಿದ್ದಾರೆ.
ಇದು ಚಂದ್ರಮೋಹನ್ ನಿರ್ದೇಶನದ ಸಿನಿಮಾ. ನೋಡಲು ಸೀರಿಯಸ್ಸಾಗಿ ಕಂಡರೂ ಭಯಂಕರ ಕಾಮಿಡಿ ಸೆನ್ಸ್ ಇರೋ ನಿರ್ದೇಶಕ ಚಂದ್ರಮೋಹನ್. ಈಗಾಗಲೇ ಅವರದ್ದೇ ನಿರ್ದೇಶನದಲ್ಲಿ ಮೂಡಿಬಂದಿರುವ ಬಾಂಬೆ ಮಿಠಾಯ್ ಮತ್ತು ಡಬಲ್ ಇಂಜಿನ್ ಸಿನಿಮಾಗಳನ್ನು ಅವರ ಹಾಸ್ಯಪ್ರಜ್ಞೆಯನ್ನು ಬಹಿರಂಗಗೊಳಿಸಿವೆ. ಈ ಸಲ ಅಭಿನಯ ಚತುರ ನೀನಾಸಂ ಸತೀಶ್ ಮತ್ತು ಕಲಾಶಾರದೆ ಅದಿತಿ ಪ್ರಭುದೇವಾ ಕೂಡಾ ಸೇರಿಕೊಂಡಿದ್ದಾರೆ. ಚಂದ್ರಮೋಹನ್ ಸ್ಕ್ರಿಪ್ಟು, ಸತೀಶ್-ಅದಿತಿ ಜೋಡಿಯ ಟೈಮಿಂಗ್ಸು… ಎಲ್ಲವೂ ಸೇರಿಕೊಂಡು ಜನ ಥಿಯೇಟರಿನ ಸೀಟಿನಲ್ಲಿ ಕೂರಲಾರದೇ ಉಳ್ಳಾಡಿಕೊಂಡು ನಗುವುದಂತೂ  ಗ್ಯಾರೆಂಟಿ!

ಇನ್ನಷ್ಟು ಓದಿರಿ

Scroll to Top