ಹೊಸ ವರ್ಷದ ಆರಂಭಕ್ಕೆ CINIBUZZ ಬೆಸ್ಟ್‌ ಅವಾರ್ಡ್!

Picture of Cinibuzz

Cinibuzz

Bureau Report

CINIBUZZ ಅನೌನ್ಸ್‌ ಮಾಡಿದ Best Award – 2024ಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಯಾವ ಸೂಚನೆಯನ್ನೂ ಕೊಡದೆ ಆಯ್ಕೆ ಪಟ್ಟಿಯನ್ನು ಘೋಷಿಸಿದಾಗ ಎಲ್ಲರೂ ಅಚ್ಛರಿಗೊಂಡಿದ್ದಾರೆ; ವರ್ಷದ ಆರಂಭವನ್ನು ಸಂಭ್ರಮಿಸಿದ್ದಾರೆ…

 ʻಯಾವ ಮುಲಾಜಿಗೂ ಒಳಗಾಗದೆ, ಅತಿ ಪ್ರಾಮಾಣಿಕವಾಗಿ ಪ್ರತಿಭಾವಂತರನ್ನು ಆಯ್ಕೆ ಮಾಡಬೇಕುʼ ಎನ್ನುವ ಏಕಮಾತ್ರ ಉದ್ದೇಶ ನಮ್ಮದಾಗಿತ್ತು. ಈಗ ಮನ್ನಣೆಗೆ ಪಾತ್ರರಾಗಿರುವವರ ಪಟ್ಟಿಯನ್ನು ನೋಡಿದ ಎಲ್ಲರೂ ಅದನ್ನು ಒಪ್ಪಿದ್ದಾರೆ; ಉತ್ತಮ ಆಯ್ಕೆ ಎಂದು ಮನಸಾರೆ ಹೇಳಿದ್ದಾರೆ. ʻಎಷ್ಟು ಚೆಂದದ ಆಯ್ಕೆ ಮಾಡಿದ್ದೀರಿ, ಒಂದೊಳ್ಳೆ ಸಮಾರಂಭ ಮಾಡಬಾರದಾ?ʼ ಅಂದವರೂ ಇದ್ದಾರೆ!

 ‘ಪ್ರಶಸ್ತಿಯೇ ಒಂದು ಸಂಭ್ರಮ. ಅದಕ್ಕೆ ಯಾಕೆ ಸಮಾರಂಭ?’ ಕನ್ನಡದ ಸೂಕ್ಷ್ಮ ಮನಸ್ಸೊಂದು ಹೇಳಿದ ಮಾತಿದು. ನಿಜ! ಇವತ್ತಿಗೆ ʻಪ್ರಶಸ್ತಿ ಪ್ರದಾನ ಸಮಾರಂಭʼಗಳನ್ನು ನಡೆಸಬೇಕೆಂದರೆ ತುಂಬಾನೇ ಖರ್ಚು ಮಾಡಬೇಕು. ಅದರಲ್ಲೂ ಸಿನಿಮಾಗೆ ಸಂಬಂಧಿಸಿದ ಪ್ರಶಸ್ತಿ ಸಮಾರಂಭಗಳಿಗೆ ಸಾಕಷ್ಟು ಜನ ಪ್ರಾಯೋಜಕರನ್ನು ಹುಡುಕಬೇಕು. ಅಷ್ಟೆಲ್ಲಾ ಖರ್ಚು ಮಾಡಿದ ಮೇಲೆ ಅವಾರ್ಡು ಸ್ವೀಕರಿಸಲು ಸೆಲೆಬ್ರಿಟಿಗಳು ಬರ್ತಾರೋ ಇಲ್ಲವೋ ಎನ್ನುವ ಆತಂಕ. ʻಯಾರು ಬರ್ತಾರೆʼ ಅಂತಾ ಮೊದಲೇ ಕೇಳಿಕೊಂಡು ಅವರಿಗೆ ಪ್ರಶಸ್ತಿ ಕೊಡಬೇಕು… ಅಬ್ಬಬ್ಬಾ! ಸಮಾರಂಭ ನಡೆಸಿ ನಷ್ಟ ಅನುಭವಿಸಿದವ ಸಂಕಟ ಆಗಾಗ ಕಣ್ಣಿಗೆ ಕಾಣುತ್ತಿರುತ್ತದೆ!!

ಪ್ರಾಯೋಜಕರನ್ನು ಹುಡುಕಿ ಸಮಾರಂಭ ಮಾಡಿ, ಪ್ರಶಸ್ತಿ ಕೊಡುವ ಶಕ್ತಿ ನಮಗಿಲ್ಲ. ಮುಖ್ಯವಾಗಿ ಪ್ರಶಸ್ತಿ ಸಮಾರಂಭದ ಹೆಸರಲ್ಲಿ ಅಂಥಾ  ವ್ಯಾಪಾರ ಮಾಡೋದಂತೂ ನಮಗೊಪ್ಪಲ್ಲ. ʻಈ ವರ್ಷದಲ್ಲಿ ಬಂದ ಉತ್ತಮ ಸಿನಿಮಾಗಳನ್ನು, ಅದರಲ್ಲಿ ಕೆಲಸ ಮಾಡಿದ ತಂತ್ರಜ್ಞರನ್ನು ಗುರುತಿಸುವುದಷ್ಟೇʼ ನಮ್ಮ ಉದ್ದೇಶವಾಗಿತ್ತು. ಈ ವರ್ಷ CINIBUZZ ಆಯ್ಕೆ ಮಾಡಿರುವ ಅನೇಕರ ಸಂಪರ್ಕ ಸಂಖ್ಯೆ ಕೂಡಾ ನಮ್ಮಲ್ಲಿಲ್ಲ. 9535369598 (mediacinibuzz@gmail.com) ಈ ನಂಬರಿಗೆ ಪೋಸ್ಟಲ್‌ ಅಡ್ರೆಸ್‌ ಕಳಿಸಿಕೊಡಿ. ಅಪಾರ ಪ್ರೀತಿಯನ್ನು ಜೊತೆಗಿಟ್ಟು ಚೆಂದದ ಪ್ರಶಸ್ತಿ  ಪತ್ರವನ್ನು ಕಳಿಸಿಕೊಡಲಾಗುವುದು…

ಪ್ರಶಸ್ತಿ ಆಯ್ಕೆಗೆ ಸಹಕರಿಸಿದ ನಿರ್ದೇಶಕ ಸುಧೀರ್‌ ಶಾನುಭೋಗ್‌, ಎಸ್.‌ ಸತೀಶ್, ಕುಮಾರ್‌ ಶೃಂಗೇರಿ, ಕೆ. ರಾಜಶೇಖರ್‌ ರಾವ್‌, ಭಾಸ್ಕರ್‌ ಆಚಾರ್‌, ಬಿಡುಗಡೆಯಾದ ಎಲ್ಲ ಸಿನಿಮಾಗಳ ಪಟ್ಟಿಯನ್ನು ಸಿದ್ದಪಡಿಸಿಕೊಟ್ಟ ಹಿರಿಯ ಪತ್ರಕರ್ತ ಚೇತನ್‌ ನಾಡಿಗೇರ್‌ ನಮ್ಮೆಲ್ಲಾ ಹೊಸ ಆವಿಷ್ಕಾರಗಳು, ಪ್ರಯೋಗಗಳಿಗೆ ಸಾಥ್‌ ನೀಡುವ ಜಯಸೂರ್ಯ, ಗೆಳೆಯ ಕಿರಣ್‌ (Action Cut Entertainment)‌, ವೆಂಕಿ ಯುಡಿವಿ, ಪತ್ರಿಕಾ ಪ್ರಚಾರ ಕರ್ತರಾದ  ನಾಗೇಂದ್ರ, ವಿಜಯ್‌ ಕುಮಾರ್‌, ಕಲ್ಲೇಶ್‌, ಬಾಬು, ಹರೀಶ್‌ ಅರಸು, ಪ್ರವೀಣ್‌ ಏಕಾಂತ, ಸುಮಂತ್‌, ಸೋಷಿಯಲ್‌ ಮೀಡಿಯಾ ಪ್ರಮೋಟರುಗಳಾದ ನವೀನ್‌, ಅನಿಲ್‌ ಯಾದವ್‌ ಮೊದಲಾದವರಿಗೆ ಧನ್ಯವಾದಗಳು.

ಅರುಣ್‌ ಕುಮಾರ್‌ ಜಿ

ಇನ್ನಷ್ಟು ಓದಿರಿ

Scroll to Top