ಲಂಡನ್ ಗೆ ಹಾರಲಿರುವ ಒಡೆಯ ಟೀಮ್!

Picture of Cinibuzz

Cinibuzz

Bureau Report

2019 ಡಿ ಬಾಸ್ ಅಭಿಮಾನಿಗಳಿಗೆ ಹಿಗ್ಗೋ ಹಿಗ್ಗು. ಚಾಲೆಂಜಿಂಗ್ ಸ್ಟಾರ್ ಪುಲ್ ಬ್ಯುಸಿಯಾಗಿರೋದೆ ಅವರ ಹಿಗ್ಗಿಗೆ ಕಾರಣ. ಅರೇ ದರ್ಶನ್ ಬ್ಯುಸಿಯಾದ್ರೆ ಅಭಿಮಾನಿಗಳ್ಯಾಕಪ್ಪ ಖುಷಿಪಡ್ಬೇಕು ಅಂದುಕೊಂಡ್ರಾ. ದರ್ಶನ್ ಬ್ಯುಸಿ ಅಂದ್ರೆ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂತಲೇ ಅರ್ಥ. ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅಭಿಮಾನಿಗಳು ಸಂತಸಪಡದೇ ಮತ್ತೇನು.

ಈಗಾಗಲೇ ದರ್ಶನ್ ಅಭಿನಯದ ಕುರುಕ್ಷೇತ್ರ ರಿಲೀಸ್ ಗೆ ರೆಡಿಯಾಗಿದೆ. ಇತ್ತ ರಾಬರ್ಟ್ ಶೂಟಿಂಗ್ ಸದ್ದಿಲ್ಲದೇ ನಡೆಯುತ್ತಿದೆ. ಈ ನಡುವೆ ಒಡೆಯ ಸಿನಿಮಾ ಯಾವ ಹಂತದಲ್ಲಿದೆ ಎಂಬ ವಿಚಾರದ ಕುರಿತಾದ ಮಾಹಿತಿ ಹೊರಬಿದ್ದಿರಲಿಲ್ಲ. ಸದ್ಯ ಒಡೆಯ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಲಂಡನ್ ನಲ್ಲಿ ಹಾಡಿನ ಚಿತ್ರೀಕರಣವೊಂದಷ್ಟೇ ಬಾಕಿ ಇದ್ದು, ಅದಾದ ಮೇಲೆ ಒಡೆಯ ಶೂಟಿಂಗ್ ಸಹ ಮುಗಿದಂತೆಯೇ. ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಒಡೆಯ ಟೀಮ್ ಲಂಡನ್ ಗೆ ಹಾರಲಿದ್ದು, ಎಲ್ಲ ಅಂದುಕೊಂಡಂತಾದರೆ ಒಡೆಯ ಆಗಸ್ಟ್ ತಿಂಗಳಿಗೆ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top