ಚೈನಾದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ಮಾಮ್!

Picture of Cinibuzz

Cinibuzz

Bureau Report

ಬಾಲಿವುಡ್ ನ ಬ್ಯೂಟಿ ಶ್ರೀದೇವಿ ನಟಿಸಿದ್ದ ಕಡೆಯ ಸಿನಿಮಾ ಮಾಮ್ ಇತ್ತೀಚಿಗಷ್ಟೇ ರಿಲೀಸ್ ಆಗಿತ್ತು. ಚೈನಾದಲ್ಲಿಯೂ ಮಾಮ್ ರಿಲೀಸ್ ಆಗಿದ್ದು, ಅಂದಾಜು 10 ಕೋಟಿಯ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ವಿಶೇಷವೆಂದರೆ ಮಾಮ್ ವಾರಂತ್ಯದಲ್ಲಿ ಟ್ರೆಂಡಿಂಗ್ ಆಗಿರುವುದು ಕೇಳಿಬಂದಿದೆ. ಭಾರತದ ರುಪಾಯಿ ಅನ್ವಯ ಮಾಮ್ ಚೈನಾದಲ್ಲಿ 67.93 ಕೋಟಿ ದಾಖಲೆ ಮಾಡಿದೆ.

ಮಾಮ್ ಸಿನಿಮಾ 38,500 ಸ್ಕ್ರೀನ್ ಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿದೆ. ಮಾಮ್ ಸಿನಿಮಾವನ್ನು ರವಿ ಉದ್ವಾರ್ ನಿರ್ದೇಶನ ಮಾಡಿದ್ದು, ಶ್ರೀದೇವಿ ಜತೆಯಾಗಿ ನವಾಜುದ್ದೀನ್ ಸಿದ್ದಿಕಿ ಅಭಿನಯಿಸಿದ್ದು, ಪತ್ತೆದಾರಿಯ ಪಾತ್ರವನ್ನು ಮಾಡಿದ್ದಾರೆ. ಮಾಮ್ ಗೆ ಎ.ಆರ್. ರೆಹಮಾನ್ ಸಂಗೀತವಿದ್ದು, ತೆಲುಗಿನ ಕೋನಾ ವೆಂಕಟರೆಡ್ಡಿ ಮಾಮ್ ಕಥೆ ಚಿತ್ರಕತೆಯನ್ನು ಬರೆದಿದ್ದಾರೆ.

ಇನ್ನಷ್ಟು ಓದಿರಿ

Scroll to Top