ಟ್ರೆಂಡಿಂಗ್ ನಲ್ಲಿದೆ ಹಫ್ತಾ ಟೈಟಲ್ ಸಾಂಗ್!

Picture of Cinibuzz

Cinibuzz

Bureau Report

ಹಫ್ತಾ ಸಿನಿಮಾದ ಆಡಿಯೋ ಇತ್ತೀಚಿಗಷ್ಟೇ ರಿಲೀಸ್ ಆಗಿದ್ದು, ಚಿತ್ರದ ಟೈಟಲ್ ಸಾಂಗ್ ಯೂಟ್ಯೂಬ್ ನಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿದೆ. ಅಲ್ಲದೇ ಪ್ರೇಕ್ಷಕರಿಂದ ಬರಪೂರ ಪಾಸಿಟೀವ್ ರಿವ್ಯೂಗಳನ್ನು ಪಡೆದುಕೊಳ್ಳುತ್ತಿದೆ.

ಸಾಂಗ್ ರಿಲೀಸ್ ಆದ ಕೆಲವೇ ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿತ್ತು. ಹೊಸ ಮುಖಗಳೇ ಹೆಚ್ಚಾಗಿರುವ ಸಿನಿಮಾದ ಹಾಡು ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಚಿತ್ರ ತಂಡದ ಸಂತಸಕ್ಕೆ ಕಾರಣವಾಗಿದೆ. ಪಕ್ಕಾ ಮಾಸ್ ಹಾಡಾಗಿರುವ ಇದು ಸಾಹಿತ್ಯಕ್ಕೆ ತಕ್ಕಂತಹ ಮ್ಯೂಸಿಕ್ ಹೊಂದಿರುವುದು ವಿಶೇಷವಾಗಿದೆ. ಹಫ್ತಾ ಟೈಟಲ್ ಸಾಂಗನ್ನು ಕವಿರಾಜ್ ಬರೆದಿದ್ದು, ಗೌತಂ ಶ್ರೀವತ್ಸ ಸಂಗೀತ ನೀಡಿದ್ದಾರೆ. ಇದೊಂದು ಭೂಗತ ಲೋಕದ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದಾಗಿದ್ದು, ಈಗಾಗಲೇ ಅನೇಕ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರ ಮಾಡಿದ್ದ ವರ್ಧನ್ ನಾಯಕನಾಗಿದ್ದಾರೆ. ರಾಘವ್ ನಾಗ್ ಬಿಂಬ ಶ್ರೀ ನೀನಾಸಂ ಹೀಗೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top