ಬುಡಕಟ್ಟಿನ ದಿರಿಸಿನಲ್ಲಿ ಕಾಳಿದಾಸನ ಹೆಂಡ್ತಿ!

Picture of Cinibuzz

Cinibuzz

Bureau Report

ಮದುವೆಯ ಮಮತೆಯ ಕರೆಯೋಲೆ ಸಿನಿಮಾದ ನಂತರ ಸಾಹಿತ್ಯ ರಚನೆಕಾರ ಕವಿರಾಜ್ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಅದಕ್ಕೆ ಕಾಳಿದಾಸ ಕನ್ನಡ ಮೇಷ್ಟ್ರು ಎಂದು ಹೆಸರಿಟ್ಟಿರುವುದು, ಜತೆಗೆ ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್ ಅವರನ್ನು ಲೀಡ್ ಆಗಿ ಸೆಲೆಕ್ಟ್ ಮಾಡಿರೋದು ಎಲ್ಲವೂ ಗೊತ್ತಿರುವ ಸಂಗತಿ.

ಸದ್ಯದ ಸುದ್ದಿ ಏನಂದ್ರೆ ಚಿತ್ರದ ನಾಯಕಿಯಾಗಿ ನಟಿಸಿರುವ ಮೇಘನಾ ಗಾಂವ್ಕರ್ ಇತ್ತೀಚಿಗೆ ತಮ್ಮದೇ ಪೇಂಟಿಂಗೊಂದನ್ನು ಚಿತ್ರಿಸಿಕೊಂಡು ಸ್ವಾನಂದ ಪಟ್ಟಿದ್ದಾರೆ. ಇಂಡೋನೇಷ್ಯಾದ ಜಾವಾ ಪ್ರವಾಸದಲ್ಲಿರುವ ಮೇಘನಾ ಅಲ್ಲಿ ಅಂಡರ್ ವಾಟರ್ ಡೈವಿಂಗ್, ಕಾಫಿ ಪ್ಲಾಂಟೇ಼ಷನ್ ಅಂತಾ ಸುತ್ತುತ್ತಾ ಮಜಾ ಮಾಡುತ್ತಿದ್ದಾರೆ. ಇದೇ ವೇಳೆ ಬುಡಕಟ್ಟು ಜನಾಂಗದವರು ಹಾಕುವಂತಹ ಉಡುಪು ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಆ ಪೋಟೋವನ್ನೇ ಪೇಯಿಂಟಿಂಗ್ ಸಹ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top