‘ರಾ ಡೈರೆಕ್ಟರ್ ’ ಜೊತೆ ಸೇರಿದ ‘ಪೈಲ್ವಾನ್’

Picture of Cinibuzz

Cinibuzz

Bureau Report

ಕನ್ನಡದ ಪ್ರತಿಭಾನ್ವಿತ ನಿರ್ದೇಶಕರ ಪಟ್ಟಿಯಲ್ಲಿ ಕೇಳಿ ಬರುವಂತಹ ಪ್ರಮುಖ ಹೆಸರುಗಳ ಪೈಕಿ ಟಗರು ಸೂರಿ ಮಂಚೂಣಿಯಲ್ಲಿರುವ ನಿರ್ದೇಶಕರು. ರಾ ಸ್ಟೋರಿ, ರಾ ಮೇಕಿಂಗ್, ರಾ ಕ್ಯಾರೆಕ್ಟರ್ ಎಂಬಿತ್ಯಾದಿ ವಿಭಿನ್ನ ಶೈಲಿಯನ್ನು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಸೂರಿ ರಾ ಡೈರೆಕ್ಟರ್ ಆಗಿಯೇ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಬಹುತೇಕ ಅವರೆಲ್ಲಾ ಸಿನಿಮಾಗಳು ಇದೇ ಕೆಟಗೆರಿಗೆ ಸೇರಿದವುಗಳೇ ಆಗಿವೆ. ಕಳೆದ ವರ್ಷ ಶಿವಣ್ಣ ಮತ್ತು ಧನಂಜಯ್ ಕಾಂಬಿನೇಶನ್ನಿನ ಟಗರು ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಸೂರಿ, ಸದ್ಯ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ತೊಡಗಿದ್ದಾರೆ. ಇದೇ ಗ್ಯಾಪಿನಲ್ಲಿ ಕಿಚ್ಚನೊಟ್ಟಿಗೆ ಮತ್ತೊಂದು ಥ್ರಿಲ್ಲಿಂಗ್ ಕಿಚ್ಚು ಹಚ್ವುವ ಪ್ಲ್ಯಾನ್ ಮಾಡುತ್ತಿದ್ದಾರೆ.

ನಿರ್ದೇಶನದ ವಿಚಾರಕ್ಕೆ ಬಂದರೆ ಸುಕ್ಕಾ ಎಂದೇ ಖ್ಯಾತಿ ಪಡೆದಿರುವ ಸೂರಿಯಂತೆ, ನಟನೆಯಲ್ಲಿ ಕಿಚ್ಚ ಸುದೀಪ್ ನಿಖರ ಹಾಗೂ ಗಂಭೀರ. ಈ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿದ್ದೇ ಆದರೆ ಹೇಗಿರಬಹುದೆಂಬ ಕೌತುಕತೆ ಸದ್ಯ ಎಲ್ಲರಲ್ಲಿಯೂ ಇದ್ದದ್ದು ಹಳೆಯ ವಿಚಾರ. ಈಗ ಇದೇ ವಿಚಾರಕ್ಕೆ ಮರು ಜೀವ ಬಂದಿದ್ದು, ಈ ಜೋಡಿಯ ಸಿನಿಮಾ ಸದ್ಯದಲ್ಲಿಯೇ ಸೆಟ್ಟೇರಲಿದೆ. ಈಗಾಗಲೇ ಸೂರಿ ಕಿಚ್ಚನಿಗಾಗಿ ಹೊಸದೊಂದು ಸಿನಿಮಾ ತಯಾರಿಯಲ್ಲಿ ನಿರತರಾಗಿದ್ದು, ಈ ಸಿನಿಮಾಕ್ಕೆ ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಅಧಿಕೃತ ಮಾಹಿತಿ ಹೊರಬೀಳಬೇಕಿದ್ದು, ಎಲ್ಲ ಅಂದುಕೊಂಡಂತೆ ಆದಲ್ಲಿ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top