ಪ್ರೇಮ ಬರಹ ಕೋಟಿ ತರಹ

Picture of Cinibuzz

Cinibuzz

Bureau Report

ಐ ಲವ್ ಯೂ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ. ಈಗಾಗಲೇ ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಘೋಷಿಸಿಕೊಂಡಿದೆ. ನವ ಸಂಗೀತ ನಿರ್ದೇಶಕ ಡಾ ಕಿರಣ್ ಸಂಯೋಜಿಸಿರುವ ಹಾಡುಗಳು ಈಗಷ್ಟೇ ಕೇಳುಗರನ್ನ ತಲುಪಿದ್ದು ಸಂಚಲನಕ್ಕೆ ಸಜ್ಜಾದಂತೆ ಕಾಣಿಸುತ್ತಿದೆ. ಚಿತ್ರದಲ್ಲಿ ಎ ಮತ್ತು ಉಪೇಂದ್ರ ಚಿತ್ರದ ಕಿಕ್ ಜೊತೆ ಎಮೋಷನ್ಸ್‍ಗಳನ್ನೂ ಮಿಶ್ರಣ ಮಾಡಿದ್ದಾರಂತೆ ಚಂದ್ರು. ಉಪೇಂದ್ರರ ಜೊತೆ ಇಲ್ಲಿ ನಾಯಕಿಯಾಗಿ ನಟಿಸಿರುವುದು ರಚಿತಾ ರಾಮ್. ಸೋನುಗೌಡ ಕೂಡಾ ಒಂದು ಮುಖ್ಯ ಪಾತ್ರದಲ್ಲಿದ್ದಾರೆ.

ಪ್ರದೀಪ್ ರಾವತ್, ಶಯಾಜಿ ಶಿಂಧೆ, ರವಿಕಾಳೆ, ರವಿಶಂಕರ್ ಸೇರಿದಂತೆ ಹೆಸರಾಂತ ಪೋಷಕ ನಟರ ದಂಡೇ ಐ ಲವ್ ಯೂ ಸಿನಿಮಾದಲ್ಲಿದೆ. ಬೆಂಗಳೂರು, ಮಂಗಳೂರು, ಹೈದರಾಬಾದ್, ದುಬೈ, ಮಸ್ಕತ್‍ನಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದ ನಿರ್ಮಾಣವೂ ಚಂದ್ರ ಅವರದ್ದೇ ಆದ್ದರಿಂದ ತಮಗೆ ಹೇಗೆ ಬೇಕೋ ಹಾಗೆ ಅದ್ಧೂರಿಯಾಗಿ ಐ ಲವ್ ಯೂ ಸಿನಿಮಾವನ್ನ ಸಿಂಗರಿಸಿ ತಂದಿದ್ದಾರೆ.

ಐ ಲವ್ ಯೂ ಕನ್ನಡ ಮಾತ್ರವಲ್ಲ, ತೆಲುಗಿನಲ್ಲೂ ಬಿಡುಗಡೆಯಾಗಲಿದೆ ಅನ್ನೋದು ಈ ಚಿತ್ರದ ಮತ್ತೊಂದು ವಿಶೇಷ. ಆಂಧ್ರ, ತೆಲಂಗಾಣದಲ್ಲೂ ಉಪೇಂದ್ರರಿಗೆ ಅಭಿಮಾನಿಗಳಿರುವುದರಿಂದ ಐ ಲವ್ ಯೂ ಅಲ್ಲೂ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಆರ್  ಚಂದ್ರು ಅವರಿಗೂ ತೆಲುಗು ಚಿತ್ರರಂಗ ಹೊಸತೇನಲ್ಲ. ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಎಂಬ ಚಿತ್ರ ನಿರ್ದೇಶನ ಮಾಡುವ ಮೂಲಕ ಚಂದ್ರು ಅಲ್ಲೂ ಹೆಸರಾಗಿದ್ದರು. ಇದೀಗ ಐ ಲವ್ ಯೂ ಮೂಲಕ ಮತ್ತೊಮ್ಮೆ ತೆಲುಗರನ್ನ ಎದುರುಗೊಳ್ಲುತ್ತಿದ್ದಾರೆ. ಉಪೇಂದ್ರರ ಹಳೆ ಅವತಾರವನ್ನ ನೋಡಿ ಮೆಚ್ಚಿಕೊಂಡಿರುವ ತೆಲುಗು ಪ್ರೇಕ್ಷಕರು ಇದೀಗ ಚಂದ್ರು ವ್ಯಾಖ್ಯಾನದಡಿ ಮೂಡಿ ಬರುವ ಉಪ್ಪಿಯ ಹೊಸ ಅವತಾರವನ್ನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನ ಕಾದು ನೋಡಬೇಕು.

ಇನ್ನಷ್ಟು ಓದಿರಿ

Scroll to Top