ಮಸಾಜ್‌ ಗಾಗಿ ಇರಿದ ರೂಪದರ್ಶಿ

Picture of Cinibuzz

Cinibuzz

Bureau Report

ಮಸಾಜ್ ಮಾಡಿದ್ದು ಸರಿಯಾಗಿಲ್ಲವೆಂದು ರೂಪದರ್ಶಿಯೊಬ್ಬಳು ಮಸಾಜ್ ಮಾಡುವವನಿಗೆ ಇರಿದ ಪ್ರಕರಣ ವರದಿಯಾಗಿದೆ. ಮಿಸ್ ನ್ಯಾಷನಲ್ ಆಸ್ಟ್ರೇಲಿಯಾ-2018ರ ಫೈನಲಿಸ್ಟ್ ಮರಿಯಾ ಡೆಲೊಸ್ಯಾಂಜೆಲೆಸ್ ಹೊರಿಗೋಮ್ ಈ ಕೃತ್ಯ ಎಸಗಿದ್ದಾಳೆ. ಹೊರಿಗೋಮ್ ತನ್ನ ಭುಜದ ನೋವನ್ನು ನಿವಾರಿಸಿಕೊಳ್ಳಲು ಕೆಲವು ದಿನಗಳಿಂದ ಮಸಾಜ್ ಪಾರ್ಲರ್ ಒಂದಕ್ಕೆ ಹೋಗುತ್ತಿದ್ದಳು. ಆದರೆ ಎಷ್ಟು ಮಸಾಜ್ ಮಾಡಿಸಿಕೊಂಡರೂ ಪರಿಹಾರ ಕಾಣದ್ದರಿಂದ ಆಕೆ ಮಸಾಜ್ ಫೀಸ್ ಕೊಡಲು ನಿರಾಕರಿಸಿದ್ದಳು. ಈ ಸಂದರ್ಭ ಇಬ್ಬರ ಮಧ್ಯೆ ಘರ್ಷಣೆ ಉಂಟಾಗಿ ಆಕೆ ತನ್ನ ಬ್ಯಾಗ್‍ ನಲ್ಲಿದ್ದ ಚೂಪಾದ ವಸ್ತುವಿನಿಂದ ಮಸಾಜ್ ಮಾಡುವವನಿಗೆ ಇರಿದಿದ್ದಾಳೆ. ಆತನ ಗಾಯಗಳಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ. ಮತ್ತೊಂದೆಡೆ ನನ್ನ ಮೂಗು ಮುಖಕ್ಕೂ ಗಾಯಗಳಾಗಿದ್ದು, ಅಂದಗೆಟ್ಟಿದೆ. ಇದರಿಂದ ನನಗೆ ಮಾಡೆಲಿಂಗ್ ಮೂಲಕ ಬರುತ್ತಿದ್ದ ಸಂಪಾದನೆಗೂ ತೊಂದರೆ ಆಗಿದೆ ಎಂದು ಮಾಡೆಲ್ ದೂರಿದ್ದಾಳೆ.

ಇನ್ನಷ್ಟು ಓದಿರಿ

Scroll to Top