ಎಕನಾಮಿಕ್ ಕ್ಲಾಸ್ ನಲ್ಲಿ ಪ್ರಯಾಣಿಸಿದ ಅಮೀರ್ ಖಾನ್!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳು ಏನು ಮಾಡಿದರೂ, ಅದು ಅಭಿಮಾನಿಗಳಿಗೆ ಸಂತಸ; ಆಶ್ಚರ್ಯ. ಸಾಕಷ್ಟು ವಿಚಾರಗಳಲ್ಲಿ ಸಿನಿ ತಾರೆಯರನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಸ್ಟಾರ್ ಗಳೇ ಗಾಡ್ ಫಾದರ್ ಗಳು ಕೂಡ. ಸಾಕಷ್ಟು ಸಿನಿ ಮಂದಿ ಸಾರ್ವಜನಿಕರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಅದಾವುದೋ ಪ್ರಮಾಧವೆಂಬಂತೆ ಫೀಲ್ ಮಾಡುತ್ತಾರೆ. ಸಾಕಷ್ಟು ಬಾರಿ ಇಂತಹ ಆರೋಪಗಳು ಬಹುತೇಕ ಸ್ಟಾರ್ ಗಳ ಮೇಲೆ ಬಂದಿರುವುದೂ ಸತ್ಯವೇ. ಇತ್ತೀಚಿಗೆ ಬಾಲಿವುಡ್ ನ ಯಶಸ್ವಿ ನಟ ಅಮೀರ್ ಖಾನ್ ಅಗತ್ಯಬಿದ್ದರೆ ತಾನು ಸಾಮಾನ್ಯ ಜನರ ಮಧ್ಯೆ ಬೆರೆಯಬಲ್ಲೆ ಎಂಬುದನ್ನು ಸಾಬೀತು ಪಡಿಸಿ ತೋರಿಸಿದ್ದಾರೆ. ಅಲ್ಲದೇ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಸಾಮಾನ್ಯರಂತೆ ಬಟ್ಟೆ ಹಾಕಿಕೊಂಡ ಅಮೀರ್ ವಿಮಾನದಲ್ಲಿ ಎಕನಾಮಿಕ್ ಕ್ಲಾಸ್ ನಲ್ಲಿ ಕುಳಿತಿದ್ದಾರೆ. ಅವರನ್ನು ನೋಡಿದ ಸುತ್ತಮುತ್ತಲಿನ ಅಭಿಮಾನಿಗಳುಆಶ್ಚರ್ಯಚಕಿತರಾಗಿ ನೋಡುತ್ತಿದ್ದರೆ ಅವರು ಮಂದಹಾಸ ಬೀರುತ್ತಿದ್ದರು. ನೀಲಿ ಹ್ಯಾಟ್ ಮತ್ತು ತಾವು ಯಾವಾಗಲೂ ಹಾಕಿಕೊಳ್ಳುವ ಕನ್ನಡಕ ಹಾಕಿಕೊಂಡಿದ್ದ ಅಮೀರ್‌ ಸರಳತೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಇದೀಗ ಹಾಲಿವುಡ್‌ನʼಫಾರೆಸ್ಟ್ ಗಂಪ್ʼ ಸಿನಿಮಾದ ರಿಮೇಕ್ ಆದ ಲಾಲ್ ಸಿಂಗ್ ಚಡ್ಡಾದ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top