ಉಪ್ಪಿಗೆ ಐ ಲವ್ ಯು ಅಂದ್ರು ಕಿಚ್ಚ!

Picture of Cinibuzz

Cinibuzz

Bureau Report

ಆರ್.ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ರಚಿತಾರಾಮ್ ಮತ್ತು ಸೋನು ಗೌಡ ಅಭಿನಯದ ಸಿನಿಮಾ ಐ ಲವ್ ಯು. ಈ ಚಿತ್ರದ ಟ್ರೇಲರ್ ಅನ್ನು ಕಿಚ್ಚ ಸುದೀಪ ರಿಲೀಸ್ ಮಾಡಿದ್ದಾರೆ.

ತಳ ಸಮುದಾಯದಲ್ಲಿನ ಪ್ರೀತಿ, ಪ್ರೇಮ, ತಳಮಳಗಳನ್ನು ತೆರೆಮೇಲೆ ಕಟ್ಟಿಕೊಡುವಲ್ಲಿ ಗೆದ್ದಿರುವ ಚಂದ್ರು ಉಪ್ಪಿ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಸಿನಿಮಾ ಐ ಲವ್ ಯು. ಈ ಚಿತ್ರದ ಟ್ರೇಲರ್ ರಿಲೀಸ್ ಗೆ ಕಿಚ್ಚನನ್ನು ಆಹ್ವಾನಿಸಲು ಚಂದ್ರು ಹೋದಾಗ ಖುದ್ದು ಕಿಚ್ಚ ಕಿಚನ್ನಿನಲ್ಲಿ ನಿಂತು ಅಡುಗೆ ಮಾಡಿ ಬಡಿಸಿ ಕಾರ್ಯಕ್ರಮಕ್ಕೆ ಬರ್ತೀನಿ ಚಿನ್ನಾ… ಎಂದಿದ್ದರಂತೆ. ನುಡಿದಂತೆ ನಡೆದ ಕಿಚ್ಚ ರಿಲೀಸಿಂಗ್ ಟ್ರೇಲರ್ ರಿಲೀಸ್ ಮಾಡಿಕೊಟ್ಟಿದ್ದಾರೆ.

ಉಪೇಂದ್ರ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡ್ಬಿಟ್ಟಿದ್ದಾರೆ. ತುಂಬಾ ಹಿಂದೆ ಕುಟುಂಬ ಸಿನಿಮಾದಲ್ಲಿ ಮಸಾಲಾ ಸಾಂಗ್ ನಲ್ಲಿ ಕುಣಿದಿದ್ದರು. ಉಪೇಂದ್ರ ಅವರಿಗೆ ಕಾಂಪಿಟೇಶನ್ ನೀಡೋ ಏಕೈಕ ಹೀರೋ ನಾನೇ! ಬೇರೆ ರಾಜ್ಯದಲ್ಲಿ ಇವತ್ತು ನಾವು ಏನೇ ಸಾಧನೆ ಮಾಡಿದರೂ ಅದಕ್ಕೆ ಉಪೇಂದ್ರ ಅವರು ಸ್ಪೂರ್ತಿ. ಯಾಕೆಂದರೆ, ಉಪ್ಪಿ ಸರ್ ಯಾವತ್ತೋ ಹೊರರಾಜ್ಯಗಳಲ್ಲಿ ತಮ್ಮ ಪ್ರತಿಭೆ ತೋರಿದವರು. ನಿಮ್ಮ ಸಿನಿಮಾ ನಿರ್ದೇಶನ ಕೂಡಾ ಮುಂದುವರೆಸಬೇಕು.

ಬಹುತೇಕ ಕಮರ್ಷಿಯಲ್ ಸಿನಿಮಾ ನಿರ್ದೇಶಕರಿಗೆ ಉಪ್ಪಿ ಸರ್ ಸ್ಫೂರ್ತಿ. ಈ ಕಾರಣಕ್ಕಾದರೂ ನೀವು ಆದಷ್ಟು ಬೇಗ ಮತ್ತೆ ನಿರ್ದೇಶನವನ್ನು ಅರಂಭಿಸಿ. ಈ ರಿಕ್ವೆಸ್ಟ್ ಮಾಡುವ ಕಾರಣಕ್ಕೇ ನಾನು ಮುಖ್ಯವಾಗಿ ಬಂದಿದ್ದೇನೆ… ಇದು ಉಪ್ಪಿಯ ಬಗ್ಗೆ ಕಿಚ್ಚನ ಪ್ರೀತಿಯ ಮಾತು.

1994ರಿಂದಾ ನಾನು ಕಿಚ್ಚನನ್ನು ನೋಡಿಕೊಂಡು ಬಂದಿದ್ದೀನಿ. ನನ್ನ ಎ ಸಿನಿಮಾವನ್ನು ನೋಡಿದ ನಂತರ ಹೈಲ್ಯಾಂಡ್ಸ್ ಹೋಟೆಲಿಗೆ ಬಂದು ವಿಶ್ ಮಾಡಿದ್ದರು. ಇವತ್ತು ಕನ್ನಡದಿಂದ ಹೋಗಿ ತಮಿಳು, ತೆಲುಗು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಹೆಸರು ಮಾಡಿದ್ದಾರೆ. ಸುದೀಪ್ ಅವರ ಬೆಳವಣಿಗೆಯನ್ನು ನೋಡಿದರೇನೆ ಖುಷಿಯಗುತ್ತೆ ಎನ್ನುತ್ತಾ ಸುದೀಪ್ ಬಗ್ಗೆ ಉಪ್ಪಿ ಅಭಿಮಾನ ವ್ಯಕ್ತಪಡಿಸಿದರು.

ಇನ್ನಷ್ಟು ಓದಿರಿ

Scroll to Top