ಮುಜುಗರದಿಂದ ಎಸ್ಕೇಪ್ ಆದ ಕೈರಾ!

Picture of Cinibuzz

Cinibuzz

Bureau Report

ಪಬ್ಲಿಕ್ಕಿಗೆ ಬಂದಾಗ ಸೆಲೆಬ್ರೆಟಿಗಳು ಎಷ್ಟರಮಟ್ಟಿಗೆ ಮೈಯೆಲ್ಲಾ ಕಣ್ಣಾಗಿಟ್ಟುಕೊಳ್ಳಬೇಕಂದ್ರೆ ಚೂರು ಮಿಸ್ಸಾದರೂ ಮುಗಿಯಿತು. ನೆರೆದಿದ್ದವರೆಲ್ಲಾ ನಗುವ, ಗರಂ ಆಗುವ, ತರಾಟೆಗೆ ತೆಗೆದುಕೊಳ್ಳುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಲೇ ಇರುತ್ತದೆ. ಅದರಲ್ಲೂ ಬಾಲಿವುಡ್ ನಲ್ಲಿ ದಿನಕ್ಕೊಂದರಂತೆ ಇಂತಹ ಘಟನೆಗಳು ಆಗುತ್ತಲೇ ಇರುತ್ತವೆ. ಹೊಸ ವಿಚಾರ ಏನಂದ್ರೆ ಬಾಲಿವುಡ್ ನ ಬಹುನಿರೀಕ್ಷಿತ ಕಬೀರ್ ಸಿಂಗ್ ಚಿತ್ರದ ಬಿಡುಗಡೆಯ ಸಂತಸದಲ್ಲಿರುವ ಬಾಲಿವುಡ್ ನಟಿ ಕೈರಾ ಅಡ್ವಾನಿಯ ಇಂತಹುದೋ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

View this post on Instagram

#kiaraadvani ❤

A post shared by Viral Bhayani (@viralbhayani) on

ನೀಲಿ ಬಣ್ಣದ ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದ ನಟಿ ಕೈರಾ ಮಾಧ್ಯಮದವರಿಗೆ ಪೋಸ್ ಕೊಡುತ್ತಿದ್ದ ವೇಳೆ ಆಕೆ ತೊಟ್ಟಿದ್ದ ಬಟ್ಟೆ ಗಾಳಿಗೆ ಮೇಲಕ್ಕೆ ಹಾರಿದ್ದು ಈ ವೇಳೆ ಆಕೆ ಬಟ್ಟೆಯನ್ನು ಹಿಡಿದುಕೊಂಡಿಲ್ಲದಿದ್ದಿದ್ದರೆ ನಗೆಗೀಡಾಗುತ್ತಿದ್ದರು. ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಜೀವನಾಧಾರಿತ ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಧೋನಿ ಪತ್ನಿ ಸಾಕ್ಷಿ ಪಾತ್ರದಲ್ಲಿ ಕೈರಾ ಅಭಿನಯಿಸಿದ್ದು ಈ ಪಾತ್ರದ ಮೂಲಕ ಜನಮೆಚ್ಚುಗೆ ಗಳಿಸಿದರು.

ಇನ್ನಷ್ಟು ಓದಿರಿ

Scroll to Top