ಕಿಚಡಿ ದಿನ್ಯಾರ್ ವಿಧಿವಶ!

Picture of Cinibuzz

Cinibuzz

Bureau Report

‘ಕಿಚಡಿ’ ರಿಯಾಲಿಟಿ ಶೋ ಖ್ಯಾತಿಯ ಬಾಲಿವುಡ್‌ ಖ್ಯಾತ ಹಾಸ್ಯನಟ ದಿನ್ಯಾರ್ ನಿನ್ನೆ ಮುಂಜಾನೆ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ದಿನ್ಯಾರ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಚೋರಿ ಚೋರಿ ಚುಪ್ಕೆ ಚುಪ್ಕೆ, ಖಿಲಾಡಿ, ಬದ್ಮಾಶ್, 36 ಚೀನಾ ಟೌನ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ದಿನ್ಯಾರ್ ನಟಿಸಿದ್ದಾರೆ. ಕಿಚಡಿ, ಕಭಿ ಇದರ್ ಕಭಿ ಉದರ್, ಹಮ್ ಸಬ್ ಏಕ್ ಹೇ, ಆಜ್ ಕೇ ಶ್ರೀಮಾನ್ ಶ್ರೀಮತಿ ಸೇರಿದಂತೆ ಸಾಕಷ್ಟು ಫೇಮಸ್ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಇದೇ ವರ್ಷ ಪದ್ಮಶ್ರೀ ಪ್ರಶಸ್ತಿಗೂ ದಿನ್ಯಾರ್ ಭಾಜನರಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ದಿನ್ಯಾರ್ ಸಾವಿಗೆ ಟ್ವಿಟರ್ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top